ಶಿರಾ : ಬೀಡಾಡಿ ದನಗಳು ಗೋ ಶಾಲೆಗೆ ಶಿಫ್ಟ್ | ಇದು ಪ್ರಜಾಶಕ್ತಿ ಇಂಫ್ಯಾಕ್ಟ್

ಬೀಡಾಡಿ ದನಗಳು
ಬೀಡಾಡಿ ದನಗಳು
ತುಮಕೂರು

ಶಿರಾ:

ಪ್ರಜಾಶಕ್ತಿ ಮಾಧ್ಯಮ ಸುದ್ದಿ ಮಾಡಿ ಸುಮ್ಮನೆ ಕೂರಲ್ಲ ಎಂದು ಸಾಬೀತು ಮಾಡುತ್ತಲೇ ಇದೆ. ಪ್ರಜಾಶಕ್ತಿ ವರದಿಗೆ ಎಚ್ಚೆತ್ತ ಅಧಿಕಾರಿಗಳು ಬಿಡಾಡಿ ದನಗಳನ್ನು ಗೋ ಶಾಲೆಗೆ ಸೇರಿಸಲು ನಿರ್ಧರಿಸಿದ್ದಾರೆ. ಹೌದು ಶಿರಾ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಬೀಡಾಡಿ ದನಗಳ ಕಾಟ ಹೆಚ್ಚಾಗಿದ್ದು, ಸವಾರರಿಗೆ ಸಂಕಷ್ಟ ಉಂಟಾಗಿತ್ತು. ಈ ಬಗ್ಗೆ ಪ್ರಜಾಶಕ್ತಿ ಯಲ್ಲಿ ಸುದ್ದಿ ಬಿತ್ತರಿಸಿ ಒಂದು ತಿಂಗಳ ಬಳಿಕ ನಗರಸಭೆ ಆಯುಕ್ತ ರುದ್ರೇಶ್‌ ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಬೀಡಾಡಿ ದನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶಿರಾ ನಗರದ ಮಾರ್ಕೆಟ್‌, ಬಸ್‌ ನಿಲ್ದಾಣ, ದೇವಸ್ಥಾನ ಸೇರಿದಂತೆ ಎಲ್ಲೆಂದರಲ್ಲಿ ಬೀಡಾಡಿ ದನಗಳು ಓಡಾಡುತ್ತಿದ್ದವು. ಇದರಿಂದ ವಾಹನ ಸವಾರರು ಅಪಘಾತಕ್ಕಿಡಾಗುತ್ತಿದ್ದರು. ಅದ್ಯಾವಾಗ ಈ ಬಗ್ಗೆ ಪ್ರಜಾಶಕ್ತಿ ವರದಿ ಮಾಡಿತ್ತೋ, ಅಧಿಕಾರಿಗಳು ಎಚ್ಚೆತ್ತುಕೊಂಡು ಗೋವುಗಳನ್ನು ವಶಕ್ಕೆ ಪಡೆದು ಗೋ ಶಾಲೆಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಬಗ್ಗೆ ಮಾತನಾಡಿದ ನಗರಸಭೆ ಆಯುಕ್ತ ರುದ್ರೇಶ್‌, ಬಿಡಾಡಿ ದನಗಳಿಂದಾಗಿ ವಾಹನ ಸಂಚಾರಕ್ಕೆ ಸಾಕಷ್ಟು ಅಡ್ಡಿಯಾಗುತ್ತಿರುವ ಹಿನ್ನೆಲೆ, ಅವುಗಳನ್ನು ಹಿಡಿದು ಚಿಕ್ಕ ಬಾಣಗೆರೆ ಗೋಶಾಲೆಗಳಿಗೆ ಕಳುಹಿಸಲು ನಿರ್ಧರಿಸಲಾಗಿದೆ. ಈಗಾಗಲೇ ಹಲವು ಬಿಡಾಡಿ ದನಗಳನ್ನು  ತಾಲೂಕಿನಲ್ಲಿರೊ ಗೋ ಶಾಲೆಗೆ ಕಳುಹಿಸಿಕೊಡಲಾಗಿದೆ. ಗೋವುಗಳ ಮಾಲೀಕರಿಗೆ ಈಗಾಗಲೇ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಆದರೂ ಸಕಾರಾತ್ಮಕವಾಗಿ ಸ್ಪಂದಿಸದೇ ಇರೋದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.

Author:

...
Editor

ManyaSoft Admin

Ads in Post
share
No Reviews