ಶಿರಾ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ಆಟೋ ಚಾಲಕರ ಸಭೆತುಮಕೂರು
ಶಿರಾ :
ಶಿರಾ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ನಿನ್ನೆ ಆಟೋ ಚಾಲಕರ ಸಭೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ಆಟೋ ಚಾಲಕರಿಗೆ ಕಾನೂನು ನಿಯಮ ಪಾಲಿಸದಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತಾ ಶಿರಾ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜೇಶ್ ಗೌಡ ಖಡಕ್ ಎಚ್ಚರಿಕೆ ನೀಡಿದರು.
ಆಟೋ ಚಾಲಕರನ್ನು ಉದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಇನ್ಸ್ಪೆಕ್ಟರ್ ಮಂಜೇಶ್ ಗೌಡ, ಚಾಲಕರು ಶಿಸ್ತಿನಿಂದ ಜನರ ಹೃದಯ ಗೆಲ್ಲಬೇಕು. ಇಲ್ಲವಾದರೆ ಸಂಚಾರ ಪೊಲೀಸರು ದಂಡ ವಿಧಿಸುತ್ತಾರೆ ಎಂದರು. ಹಲವು ಆಟೋಗಳು ಪ್ರಮಾಣ ಪತ್ರ ಹೊಂದಿಲ್ಲ, ಹಾಗೂ ಚಾಲನಾ ಪರವಾನಗಿ ಹೊಂದದೇ ಸಂಚಾರಿ ನಿಯಮ ಮೀರಿ ಬದಲಾವಣೆ ಮಾಡಿಕೊಂಡು ಹೆಚ್ಚಿನ ಆಸನ ವ್ಯವಸ್ಥೆ ಮಾಡಿಕೊಂಡು ಚಲಾಯಿಸಿದರೆ ಅಂತವರ ವಿರುದ್ದ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ರಸ್ತೆಯಲ್ಲಿ ಅಜಾಗರೂಕತೆಯಿಂದ ಆಟೋ ಚಲಾಯಿಸುವರ ಚಾಲಕರ ಸಂಖ್ಯೆ ಹೆಚ್ಚಾಗಿದೆ. ರಸ್ತೆಯಲ್ಲಿ ಹೋಗುವಾಗ ಇತರ ವಾಹನ ಸವಾರರು, ಪಾದಚಾರಿಗಳ ಸುರಕ್ಷತೆ ಬಗ್ಗೆಯೂ ಗಮನಹರಿಸಬೇಕು. RTO ಕಛೇರಿಯಲ್ಲಿ ದಾಖಲೆ ನವೀಕರಿಸಿಕೊಳ್ಳಬೇಕು ಎಂದರು. KSRTC ಬಸ್ ನಿಲ್ದಾಣದಲ್ಲಿ ಆಟೋ ನಿಲುಗಡೆ ಹೆಚ್ಚಾಗಿದ್ದು ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಅಧಿಕಾರಿಗಳಿಂದ ದೂರುಗಳು ಬರ್ತಿವೆ. ಆದ್ದರಿಂದ ನಿಗದಿತ ಸ್ಥಳದಲ್ಲೇ ವಾಹನ ನಿಲ್ಲಿಸಬೇಕು, ಕೂಡಲೇ ಎಲ್ಲರೂ ಪಾಸ್ ಹೊಂದಬೇಕು ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೋಳ್ಳಲಾಗುವುದು ಎಂದರು.
ಈ ವೇಳೆ ಆಟೋ ಚಾಲಕರ ಸಂಘಟನೆ ಅಧ್ಯಕ್ಷ ಸಿದ್ದೇಶ್ವರ ಸೇರಿದಂತೆ ಆಟೋ ಚಾಲಕರು ಹಾಗೂ ನಗರ ಪೊಲೀಸ್ ಠಾಣೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.