ಪಾವಗಡ : ಭಕ್ಷಕ ಚಿರತೆಗಳ ದಾಳಿಗೆ ಕುರಿ, ಮೇಕೆಗಳು ಬಲಿ

ಪಾವಗಡ :

ತುಮಕೂರು ಜಿಲ್ಲೆಯಲ್ಲಿ ಭಕ್ಷಕ ಚಿರತೆಯ ಕಾಟ ಮತ್ತೇ ಶುರುವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಕೆರೆಯಂಗಳದಲ್ಲಿ ಮೇಯುತ್ತಿದ್ದ ಕುರಿಹಿಂಡಿನ ಮೇಲೆ ಎರಡು ಚಿರತೆಗಳು ದಾಳಿ ಮಾಡಿದ್ದು, 2 ಕುರಿ ಮತ್ತು 2 ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕನ್ನಮೇಡಿ ಗ್ರಾಮದಲ್ಲಿ ನಡೆದಿದೆ. ಚಿರತೆ ದಾಳಿಯಿಂದಾಗಿ ಕನ್ನಮೇಡಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಕನ್ನಮೇಡಿ ಗ್ರಾಮದ ಕುರಿಗಾಹಿ ಹನುಮಂತರಾಜು ಎಂಬುವವರಿಗೆ ಸೇರಿದ ಕುರಿ ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿವೆ. ಗ್ರಾಮದ ಹೊರವಲಯದ ಕೆರೆ ಹತ್ತಿರ ಕುರಿ, ಮೇಕೆಗಳನ್ನ ಮೇಯಿಸಲು ಹೋದಾಗ ಪೊದೆಯಲ್ಲಿ ಅಡಗಿದ್ದ ಚಿರತೆಗಳು ಅಟ್ಯಾಕ್‌ ಮಾಡಿದ್ದು, ಎರಡು ಕುರಿ ಮತ್ತು ಎರಡು ಮೇಕೆಗಳನ್ನ ಬಲಿ ತೆಗೆದುಕೊಂಡಿವೆ. ಇನ್ನು ಈ ದೃಶ್ಯವನ್ನ ಕಣ್ಣಾರೆ ಕಂಡ ಕುರಿಗಾಹಿ ಬೆಚ್ಚಿಬಿದ್ದಿದ್ದಾನೆ. ಕುರಿ ಮೇಕೆಗಳನ್ನು ಕಳೆದುಕೊಂಡು ಇವುಗಳನ್ನೇ ನಂಬಿ ಬುದುಕುತ್ತಿದ್ದ ನನಗೆ ಅಪಾರ ನಷ್ಟವಾಗಿದೆ ಎಂದು ಕಣ್ಣಿರಾಕ್ತಿದ್ದು ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಇನ್ನು ಮಾಹಿತಿ ತಿಳಿದ ಕೂಡಲೇ ಪಶು ವೈಧ್ಯಾದಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಮೇವಿನ ಅಭಾವದಿಂದ ಬೆಟ್ಟಗುಡ್ಡಗಳ ಕಡೆ ಜಾನುವಾರುಗಳನ್ನ ಮೇಯಿಸಲು ಹೋಗ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಚಿರತೆಯನ್ನ ಸೆರೆ ಹಿಡಿದು ಗ್ರಾಮಸ್ಥರ ಆತಂಕ ದೂರ ಮಾಡುವಂತೆ ಆಗ್ರಹಿಸಿದ್ದಾರೆ.

Author:

...
Editor

ManyaSoft Admin

share
No Reviews