ಇನ್ನು ತುಮಕೂರಿನಲ್ಲೂ ಅನೇಕ ದೇವಸ್ಥಾನಗಳಿದ್ದು, ಕೆಲವೊಂದು ಸ್ವಕ್ಷೇತ್ರಗಳು ಪವಾಡದ ಮೂಲಕ ಭಕ್ತರ ಕಷ್ಟವನ್ನು ನಿವಾರಣೆ ಮಾಡ್ತಾ ಇದೆ.. ಇಂತಹ ಆಧುನಿಕ ಯುಗದಲ್ಲೂ ಬೈಲಾಂಜನೇಯ ಸ್ವಾಮಿ ದೇವರನ್ನು ಕಂಡು ನೀವು ಆಶ್ಚರ್ಯ ಪಡೋದಂಥೂ ಖಂಡಿತಾ..
ಹೌದು ಶಿರಾ ನಗರ ಹಾಗೂ ತುಮಕೂರು ಹೈವೇ ಪಕ್ಕದಲ್ಲಿರೋ ಹನುಮಂತಪುರದಲ್ಲಿ ಬೈಲಾಂಜನೇಯಸ್ವಾಮಿ ಪವಾಡ ಅಷ್ಟಿಷ್ಟು ಅಲ್ಲ.. ಸುಮಾರು 400 ವರ್ಷಗಳ ಇತಿಹಾಸ ಇರೋ ಈ ದೇವರನ್ನು ಸೀಬಿ ಸುತ್ತಮುತ್ತಲ 14 ಹಳ್ಳಿಗಳ ಭಕ್ತರು ಬೈಲಾಂಜನೇಯ ಸ್ವಾಮಿಯನ್ನು ನಂಬಿದ್ದಾರೆ… ಕಷ್ಟ ಎಂದು ಬಂದ್ರೆ ಈ ಸ್ವಾಮಿ ಎಂದು ಕೈಬಿಡಲ್ಲ ಎಂದು ಇಲ್ಲಿನ ಭಕ್ತರು ನಂಬಿದ್ದಾರೆ.. ಇನ್ನು ಭಕ್ತರ ಕಷ್ಟ ಪರಿಹಾರ ಮಾಡಿಕೊಡುವ ಭರವಸೆ ನೀಡುತ್ತಿದ್ದು.. ಹೂವುನ್ನು ಪ್ರಸಾದ ರೂಪದಲ್ಲಿ ಕೊಡುವ ಮೂಲಕ ಭಕ್ತರಿಗೆ ಅಭಯ ನೀಡ್ತಾರೆ ಅನ್ನೋ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.
ಇನ್ನು ಭಕ್ತರು ಮದುವೆ ಆಗಿಲ್ಲ… ಸಂತಾನ ಇಲ್ಲ… ಬೋರ್ ಹಾಕಿಸಿವ ವಿಚಾರ… ಇನ್ನಿತ್ತರೆ ಭಕ್ತರ ಇಷ್ಟಾರ್ಥದ ಬಗ್ಗೆ ಭಕ್ತರು ಕೇಳಿಕೊಂಡ್ರೆ ಆ ಕೆಲಸ ಆಗುವಂತಿದ್ರೆ ದೇವರ ಬಲ ಭಾಗದಲ್ಲಿ.. ಕೆಲಸ ಆಗದಿದ್ರೆ ಎಡಭಾಗದಲ್ಲಿ ಹೂವನ್ನು ಕೊಡುವ ಮೂಲಕ ಬೈಲಾಂಜನೇಯಸ್ವಾಮಿ ತನ್ನ ಪವಾಡವನ್ನು ತೋರಿಸಿದೆ… ಇನ್ನು ಸುತ್ತಮುತ್ತಲ ಹತ್ತಾರು ಗ್ರಾಮದ ಜನರು ತಮ್ಮ ಜಮೀನಿನಲ್ಲಿ ಬೋರ್ ಹಾಕಿಸುವಂತಿದ್ರೆ ಅಲ್ಲಿ ನೀರು ಸಿಗುತ್ತೆ ಅನ್ನೋದಾದ್ರೆ ಪ್ರಸಾದವನ್ನು ಕೊಡುತ್ತೆ… ಇಲ್ಲಿ ಬಂದ ಭಕ್ತರ ಕೈಯನ್ನು ಎಂದು ಈ ದೇವರು ಕೈಬಿಟ್ಟಿಲ್ಲ ಎಂದು ಭಕ್ತರಲ್ಲಿ ಅಪಾರ ನಂಬಿಕೆ ಇದೆ..
ಇಂಥಹ ವೈಜ್ಞಾನಿಕ ಯುಗದಲ್ಲೂ ದೇವರು ಈ ರೀತಿಯ ಚಕಿತಗಳನ್ನು ತೋರಿಸಿಕೊಡುವ ಮೂಲಕ ಭಕ್ತರಿಗೆ ನಾನಿದ್ದೇನೆ ಅನ್ನೋದನ್ನ ತೋರಿಸಿಕೊಡುತ್ತಿದ್ದು… ಅಪಾರ ಸಂಖ್ಯೆಯ ಭಕ್ತರು ಈ ಬೈಲಾಂಜನೇಯ ಸ್ವಾಮಿಯನ್ನು ನಂಬಿ ಬಂದು ತಮ್ಮ ಕಷ್ಟವನ್ನು ಕಳೆಯುವಂತೆ ಅರಸಿ ಬರ್ತಾ ಇದ್ದಾರೆ… ನೀವು ಕೂಡ ಒಮ್ಮೆ ಭೇಟಿ ನೀಡಿ ನೀವೆ ಒಮ್ಮೆ ಚಕಿತಕ್ಕೆ ಒಳಗಾಗೊದು ಮಾತ್ರ ಖಚಿತ.