Sandalwood: ಧಿಡೀರ್ ಹೃದಯಾಘಾತ "ನವಗ್ರಹ" ಖ್ಯಾತಿಯ ಗಿರಿ ದಿನೇಶ್ ನಿಧನ

ನಟ ಗಿರಿ ದಿನೇಶ್‌ (45)
ನಟ ಗಿರಿ ದಿನೇಶ್‌ (45)
ಸಿನಿಮಾ-ಟಿವಿ

ಬೆಂಗಳೂರು:

ಕನ್ನಡ ಚಿತ್ರರಂಗದ ದಿವಂಗತ ಹಾಸ್ಯ ಹಿರಿಯ ನಟ ದಿನೇಶ್ ರವರ ಪುತ್ರ, ನವಗ್ರಹ  ಸಿನಿಮಾದ ಶೆಟ್ಟಿ ಖ್ಯಾತಿಯ ನಟ ಗಿರಿ ದಿನೇಶ್‌ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ಗಿರಿ ಸಿನಿಮಾ ರಂಗದಲ್ಲಿ ಯಶಸ್ಸು ಸಿಗದೇ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

ಹೌದು ನಟ ಗಿರಿ ದಿನೇಶ್‌ ಅವರಿಗೆ 45 ವರ್ಷ ವಾಯಸ್ಸಾಗಿದ್ದು, ಶುಕ್ರವಾರ ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ದಿಢೀರ್​ ಹಾರ್ಟ್​ ಅಟ್ಯಾಕ್​ ಆಗಿದ್ದು, ಮನೆಯಲ್ಲೇ ಗಿರಿ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆಯೇ ಇವರು ನಿಧನರಾಗಿದ್ದಾರೆ.

ಇನ್ನು ಗಿರಿ ಅವರು ನವಗ್ರಹ ಸಿನಿಮಾದಲ್ಲಿ ಶೆಟ್ಟಿ ಪಾತ್ರದ ಮೂಲಕ ಖ್ಯಾತಿಯನ್ನು ಗಳಿಸಿದ್ದರು, ಈ ಚಿತ್ರ 2008ರಲ್ಲಿ ಬಿಡುಗಡೆಯಾಗಿತ್ತು.  ಕಳೆದ ವರ್ಷ ನವೆಂಬರ್​ 8ರಂದು ನವಗ್ರಹ ಚಿತ್ರ ಮರುಬಿಡುಗಡೆಯಾಗಿತ್ತು. ಇವರು ಚಮಕಾಯ್ಸಿ ಚಿಂದಿ ಉಡಾಯ್ಸಿ, ವಜ್ರ  ಸೇರಿದಂತೆ ಇತರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ನವಗ್ರಹ ಚಿತ್ರದ ಶೆಟ್ಟಿ ಪಾತ್ರ ಹೆಚ್ಚಿನ ಹೆಸರು ತಂದುಕೊಟ್ಟಿತ್ತು. ಹಾಗೂ ಗಿರಿ ದಿನೇಶ್‌ ಅವರು ನಟ ದರ್ಶನ್‌ ಅವರಿಗೆ ಬಹಳ ಆತ್ಮೀಯರಾಗಿದ್ದರು. ಗಿರಿ ದಿನೇಶ್ ನಿಧನಕ್ಕೆ ಆಪ್ತರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Author:

...
Editor

ManyaSoft Admin

Ads in Post
share
No Reviews