Sandalwood :
ಟಗರು ಪಲ್ಯ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ನಟ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾಗೆ ದೊಡ್ಡಮನೆ ಕುಡಿ ಜೊತೆ ನಟಿಸೋ ಅವಕಾಶ ಸಿಕ್ಕಿದೆ. ಟಗರು ಪಲ್ಯ ಚಿತ್ರದ ಮೂಲಕ ನಟಿಸಿ ಕನ್ನಡ ಸಿನಿರಂಗಕ್ಕೆ ಅಮೃತಾ ಪಾದಾರ್ಪಣೆ ಮಾಡಿದರು. ಇನ್ನು ಮೊದಲ ಸಿನಿಮಾದಲ್ಲೇ ಗಮನ ಸೆಳೆದಿದ್ದ ಈ ನಟಿ ಇದೀಗ ಧೀರೆನ್ ರಾಜ್‌ಕುಮಾರ್‌ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
‘ಟಗರು ಪಲ್ಯ’ ಚಿತ್ರದ ಬಳಿಕ ‘ಅರಸು’ ಖ್ಯಾತಿಯ ನಿರ್ದೇಶಕ ಮಹೇಶ್ ಬಾಬು ನಿರ್ದೇಶನದ ‘ಅಮ್ಮು’ ಚಿತ್ರಕ್ಕೆ ಆಯ್ಕೆಯಾಗಿದ್ದರು. ಈ ಬೆನ್ನಲ್ಲೇ ದೊಡ್ಮನೆ ಕುಡಿ ಧೀರೆನ್‌ಗೆ ಹೀರೋಯಿನ್ ಆಗಿ ನಟಿಸುವ ಅವಕಾಶ ಸಿಕ್ಕಿದೆ. ಧೀರೆನ್ ನಟನೆಯ ‘ಪಬ್ಬಾರ್’ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ. ಮೇ 7ರಂದು ಅದ್ಧೂರಿಯಾಗಿ ಸಿನಿಮಾಗೆ ಚಾಲನೆ ನೀಡಲಾಯ್ತು. ಇದೊಂದು ಕ್ರೈಮ್ ಹಾಗೂ ಥ್ರಿಲ್ಲರ್ ಒಳಗೊಂಡಿರುವ ಚಿತ್ರವಾಗಿದೆ. ಸ್ಟೈಲ್ ಗುರು ರಕ್ಷಿತ್ ಜೊತೆ ಅಮ್ಮು ಚಿತ್ರದಲ್ಲಿ ನಟಿಸ್ತಿದ್ದು, ಇದೀಗ ಪಬ್ಬಾರ್ ಸಿನಿಮಾದಲ್ಲಿ ಧೀರೆನ್ ರಾಮ್ ಕುಮಾರ್ ಗೆ ಜೋಡಿಯಾಗಿ ನಟಿಸ್ತಿದ್ದು, ಈ ಎರಡು ಸಿನಿಮಾಗಳ ಮೂಲಕ ಅಮೃತಾ ಕನ್ನಡ ಸಿನಿರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಪಬ್ಬಾರ್ ಸಿನಿಮಾವನ್ನು ಮಡಿಕೇರಿಯಲ್ಲಿ ಚಿತ್ರೀಕರಣ ಆರಂಭಿಸಿ ಬಳಿಕ ಪಬ್ಬರ್ ಕಣಿವೆಗೆ ಹೋಗಿ ದೃಶ್ಯಗಳನ್ನು ಸೆರೆ ಹಿಡಿಯಲು ಚಿತ್ರತಂಡ ತೀರ್ಮಾನಿಸಿದೆ. ಮೇ 15ರಿಂದ ಪಬ್ಬಾರ್ ಸಿನಿಮಾದ ಶೂಟಿಂಗ್ ಶುರುವಾಗಲಿದೆ.