Sandalwood : ದರ್ಶನ್ ಅಭಿಮಾನಿ ಆಗಿದ್ದಕ್ಕೆ ಬಿಗ್ ಬಾಸ್ ಚಾನ್ಸ್ ಮಿಸ್..!

Sandalwood :

ನಟ ದರ್ಶನ್‌ ಅಭಿಮಾನಿ ಎಂಬ ಕಾರಣಕ್ಕೆ ನಟ ಅಂಜನ್‌ ದೀಪು ಅವರನ್ನು ಬಿಗ್ ಬಾಸ್ ನಿಂದ ರಿಜೆಕ್ಟ್‌ ಮಾಡಲಾಗಿದ್ಯಂತೆ. ಈಗೆಂದು ಸ್ವತಃ ಅಂಜನ್‌ ದೀಪು ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಕನ್ನಡದಲ್ಲಿ ಈವರೆಗೂ 11 ಬಿಗ್ ಬಾಸ್‌ ಸೀಸನ್‌ ಗಳು ಪ್ರಸಾರ ಆಗಿದೆ. ಬಿಗ್‌ ಬಾಸ್‌ ಕಾರ್ಯಕ್ರಮದ ಬಗ್ಗೆ ಹಲವು ರೂಮರ್ಸ್‌, ಗಾಸಿಪ್‌ ಗಳು ಆಗಾಗ ಇದ್ದೇ ಇದೆ. ಆದರೆ ಇದೀಗ ಕನ್ನಡ ಬಿಗ್‌ ಬಾಸ್‌ ರಿಯಾಲಿಟಿ ಶೋ ಬಗ್ಗೆಯೇ ಜಿಮ್‌ ಟ್ರೈನರ್‌ ಕಮ್‌ ನಟ ಆಗಿರೋ ಅಂಜನ್‌ ದೀಪು ಆರೋಪ ಮಾಡ್ತಿದ್ದಾರೆ.

ನಾನು ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ಅವರ ಅಪ್ಪಟ ಅಭಿಮಾನಿ ಎಂಬ ಕಾರಣಕ್ಕೆ ಬಿಗ್‌ ಬಾಸ್‌ ನಿಂದ ರಿಜೆಕ್ಟ್‌ ಮಾಡಿದರು ಎಂದಿದ್ದಾರೆ. ಅಲ್ಲದೇ ನಾನು ಯಾವತ್ತಿಗೂ ದರ್ಶನ್ ಸರ್‌ ಅಭಿಮಾನಿ, ಮುಂದೆಯೂ ದರ್ಶನ್‌ ಸರ್‌ ಅಭಿಮಾನಿಯೇ ಆಗಿರ್ತಿನಿ ಅಂತ ಅಂಜನ್ ದೀಪು ಬಾಸ್‌ ಟಿವಿ ಎಂಬ ಕನ್ನಡ ಯೂಟ್ಯೂಬ್‌ ವಾಹಿನಿಯ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews