CINEMA: ತಿಮ್ಮಪ್ಪನ ದರ್ಶನ ಪಡೆದ ಸ್ಯಾಂಡಲ್‌ವುಡ್‌ ನಟಿ ರಾಗಿಣಿ

ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಸಿನಿಮಾದ ಕೆಲಸಗಳಿಗೆ ನಟಿ ಬ್ರೇಕ್ ಹಾಕಿ ರಾಮ ನವಮಿಯಂದು ರಾಗಿಣಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಲ ಕಾಲ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ. ಅದಷ್ಟೇ ಅಲ್ಲ, ಶ್ರೀಕಾಳಹಸ್ತಿ ಮತ್ತು ಪದ್ಮಾವತಿ ದೇವಸ್ಥಾನಕ್ಕೂ ಅವರು ತೆರಳಿ ಪೂಜೆ ಸಲ್ಲಿಸಿದ್ದಾರೆ. ಪೊಗರು ಡೈರೆಕ್ಟರ್ ನಂದ ಕಿಶೋರ್ ಅವರು ಮೋಹನ್ ಲಾಲ್‌ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ನಟಿ ರಾಗಿಣಿ ದ್ವಿವೇದಿ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಈ ವರ್ಷ ಅ.16ರಂದು ರಿಲೀಸ್ ಆಗಲಿದೆ.

 

 

Author:

share
No Reviews