ಗುಬ್ಬಿ:
ಗುಬ್ಬಿ ತಾಲೂಕಿನ ಕಡಬಾ ಗ್ರಾಮ ಪಂಚಾಯ್ತಿಯ ನೂತನ ಕಟ್ಟಡಕ್ಕೆ ಶಾಸಕ ಎಸ್.ಆರ್ ಶ್ರೀನಿವಾಸ್ ಗುದ್ದಲಿ ಪೂಜೆ ನೆರವೇರಿಸಿದರು, ಈ ವೇಳೆ ಕಡಬ ಗ್ರಾಪಂ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷೆ ಕಲ್ಪನಾ, ತಾಲೂಕು ಪಂಚಾಯ್ತಿಯ ಮಾಜಿ ಅಧ್ಯಕ್ಷ ಬಾಲಕೃಷ್ಣ, ಮುಖಂಡರಾದ ಧರ್ಮೇಗೌಡ ಸೇರಿ ಹಲವರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಶಾಸಕ ಎಸ್.ಆರ್ ಶ್ರೀನಿವಾಸ್, 2013 ರಲ್ಲಿ ಸಿದ್ದರಾಮಯ್ಯ ಅವರೆ ಪರಿಶಿಷ್ಟ ಜಾತಿ , ಪಂಗಡಕ್ಕೆ ಮೀಸಲಿಟ್ಟ ಹಣ ಬಳಸದಂತೆ ಕಾನೂನು ಜಾರಿ ಮಾಡಿದ್ದರು, ಅಲ್ಲದೇ ಒಂದು ವೇಳೆ ಬಳಸಿದರೂ ಒಂದು ವರ್ಷದಲ್ಲೇ ಫುಲ್ ಫಿಲ್ ಮಾಡಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿ ವಿರುದ್ದ ಪೊಲೀಸ್ ಕೇಸ್ ದಾಖಲು ಮಾಡುವಂತಹ ಕೆಲಸ ನಮ್ಮ ಸರ್ಕಾರ ಮಾಡುತ್ತೇ ಅಂತಾ ಎಸ್.ಆರ್ ಶ್ರೀನಿವಾಸ್ ಸಮರ್ಥಿಸಿಕೊಂಡರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಾಂವಿಧಾನಾತ್ಮಕ ಹುದ್ದೆ ಅಲ್ಲ ಅಂತಾ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿರೋ ಶಾಸಕರು, ಜನಾಂಗಕ್ಕೊಂದು ನಿಗಮ ಮಂಡಳಿ ರಚಿಸಿ ಮೂಲ ವೆಚ್ಚಗಳನ್ನು ಸರ್ಕಾರವೇ ಭರಿಸಿವೆ. ಆಯಾ ಸರ್ಕಾರ ನಿಗಮ ಮಂಡಳಿ ಸಮಿತಿ ರಚಿಸಿ ನಡೆಸೋದು ವಾಡಿಕೆಯಾಗಿದೆ ಎಂದರು.
ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗಳು ಕಳಪೆಯಾಗಿದೆ ಎಂದು ದೂರು ಬಂದ ತಕ್ಷಣವೇ ಪಿಡಿಓಗಳ ಸಭೆ ಕರೆದು ಕಾಮಗಾರಿ ಗುಣಮಟ್ಟದ ಬಗ್ಗೆ ಕೂಲಂಕಷ ಪರಿಶೀಲನೆ ಮಾಡಿ ಹಸ್ತಾಂತರ ಪಡೆಯಬೇಕು. ದೂರು ಇರುವ ಕೆಲಸವನ್ನು ಸರಿಪಡಿಸಿ ಪಂಚಾಯಿತಿಗೆ ನೀಡಬೇಕು. ಜೊತೆಗೆ ಒಂದು ವರ್ಷ ಕಳೆದರೂ ಕೆಲಸ ಆರಂಭಿಸದೇ ಇದ್ದರೆ ಗುತ್ತಿಗೆ ರದ್ದು ಮಾಡಿ ಮರು ಟೆಂಡರ್ ಮಾಡಲು ಸೂಚಿಸಲಾಗಿದೆ ಅಂತಾ ಶಾಸಕ ಎಸ್.ಆರ್ ಶ್ರೀನಿವಾಸ್ ಹೇಳಿದರು.