ಸಿನಿಮಾ:
ಕಾಂತಾರ ಸಿನಿಮಾದ ಮೂಲಕ ಫೇಮಸ್ ಆಗಿರೋ ನಟ ಎಂದರೆ ರಿಷಬ್ ಶೆಟ್ಟಿ. ಕಾಂತಾರ ಬಳಿಕ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರೋ ಸ್ಟಾರ್ ನಟ ಕೂಡ ಹೌದು. ಸದ್ಯ ರಿಷಬ್ ಕಾಂತಾರ ಚಾಪ್ಟರ್ 1ನಲ್ಲಿ ಬ್ಯುಸಿಯಾಗಿದ್ದಾರೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಸ್ಯಾಂಡಲ್ವುಡ್ ಮಾತ್ರವಲ್ಲದೇ ಟಾಲಿವುಡ್ ಬಳಿಕ ಬಾಲಿವುಡ್ನ ಬಿಗ್ ಬಜೆಟ್ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.
ಇದೀಗ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮಕ್ಕಳು ಸಹ ರ್ಯಾಂಪ್ ವಾಕ್ ಮಾಡುತ್ತಾ ಮಿಂಚಿದ್ದಾರೆ. ನಟ ರಿಷಬ್ ಶೆಟ್ಟಿ ಮಕ್ಕಳು ಈಗ ಓಕ್ವುಡ್ ಇಂಡಿಯನ್ ಸ್ಕೂಲ್ ನಲ್ಲಿ ನಡೆದ ಕಿಡ್ಸ್ ರ್ಯಾಂಪ್ ವಾಕ್‌ನಲ್ಲಿ ಭಾಗವಹಿಸಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಮಕ್ಕಳಾದ ರಣ್‌ವಿತ್ ಮತ್ತು ರಾಧ್ಯಾ ಸೂಪರ್ ಆಗಿ ರ್ಯಾಂಪ್ ವಾಕ್ ಮಾಡಿದ್ದು.ಈ ವಿಡಿಯೋವನ್ನು ಪ್ರಗತಿ ಶೆಟ್ಟಿ ಅವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.