ಚಿಕ್ಕಬಳ್ಳಾಪುರ :
ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದ ಮನಕಲಕುವ ಘಟನೆಯಿದು. ಕಳೆದ ಹತ್ತು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ಬಸಪ್ಪ ಛತ್ರದಲ್ಲಿ ವಾಸ ಮಾಡ್ತಾ ಇದ್ದ ನಿರಾಶ್ರಿತರನ್ನ ಮನೆ ನಿರ್ಮಾಣ ಮಾಡಲು ಸ್ಥಳ ಕೊಡಿಸೋದಾಗಿ ಹೇಳಿ ಖಾಸಗಿ ಜಮೀನಲ್ಲಿ ನಿರಾಶ್ರಿತರು ವಾಸ ಮಾಡೋದಕ್ಕೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿದ್ರು, ಆದ್ರೆ ಈಗ ಜಮೀನು ಮಾಲೀಕನ ಕಡೆಯವ್ರು ಬಂದು ಜಾಗ ಖಾಲಿ ಮಾಡಿ ಅಂತ ಹೇಳ್ತಿದ್ದು, ನಿರಾಶ್ರಿತರ ಕಣ್ಣೀರಿಗೆ ಕಾರಣವಾಗಿದೆ.
ಹೌದು ಈ ಜಾಗದಲ್ಲಿ ಪ್ರಾಣಿಗಳು ವಾಸಿಸೋ ರೀತಿ ಇದೆ, ಆದ್ರೆ ಇಲ್ಲಿ ದುರಾದೃಷ್ಟ ಅಂದ್ರೆ ಮನುಷ್ಯರು ವಾಸಿಸ್ತಾ ಇದಾರೆ…. ಅಂದ ಹಾಗೆ ಕಳೆದ 10 ವರ್ಷದ ಹಿಂದೆ ಚಿಕ್ಕಬಳ್ಳಾಪುರ ನಗರದ ಬಸಪ್ಪ ಛತ್ರದಲ್ಲಿ ವಾಸ ಮಾಡ್ತಿದ್ದ ನಿರಾಶ್ರಿತರಿಗೆ ಅಂದಿನ ಶಾಸಕರು, ನಗರಸಭೆ ಅಧಿಕಾರಿಗಳು ಮನೆ ನಿರ್ಮಿಸಿಕೊಳ್ಳಲು ಜಾಗ ಕೊಡೊದಾಗಿ ಹೇಳಿ 65 ಕುಟುಂಬಗಳನ್ನ ಕಂದವಾರ ಬಳಿ ಇರೋ ಗಜಲಕ್ಷ್ಮಿ ಎಂಬುವರ ಜಮೀನಲ್ಲಿ ಶೆಡ್ ನಿರ್ಮಿಸಿ ನಿವೇಶನ ನೀಡೋವರೆಗೂ ಇಲ್ಲಿ ವಾಸ ಮಾಡಿ ಅಂದಿದ್ರು, ನಿರಾಶ್ರಿತರು ಕಳೆದ ಹತ್ತು ವರ್ಷಗಳಿಂದ ಈ ಕೊಳಕು ಜಾಗದಲ್ಲೇ ಬದುಕು ನಡೆಸ್ತಿದ್ದಾರೆ.
ಈ ಅವಧಿಯಲ್ಲಿ ಇವ್ರಲ್ಲಿ 40 ಕುಟುಂಬಗಳು ನಗರಸಭೆಯಿಂದ ಸಿಕ್ಕ ಸೈಟ್ ಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡ್ತಿದ್ದಾರೆ. ಆದ್ರೆ ೨೦ಕ್ಕೂ ಹೆಚ್ಚು ಕುಟುಂಬ ಕಡು ಬಡವರಾಗಿದ್ದು ಮನೆ ಕಟ್ಟಲು ಹಣವಿಲ್ದೇ ಅಂಗವಿಕಲ ತಂದೆ ತಾಯಿಯನ್ನ ಪೋಷಣೆ ಮಾಡಿಕೊಂಡು ಇಲ್ಲೇ ಇದಾರೆ. ಆದ್ರೆ ಈಗ ಏಕಾಏಕಿ ಖಾಸಗಿ ಜಮೀನು ಮಾಲೀಕನ ಕಡೆಯವ್ರು ಬಂದು ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕಿ, ಮನೆಯಲ್ಲಿರೋ ಸಾಮಾಗ್ರಿಗಳನ್ನ ಹೊರ ಹಾಕಿ, ಶೆಡ್ ಗಳನ್ನ ತೆರವು ಮಾಡ್ತಿರೋದು ನಿರಾಶ್ರಿತರ ಅಕ್ರೋಶಕ್ಕೆ ಕಾರಣವಾಗಿದೆ.
ಇನ್ನು ನಗರಸಭೆ ಅಧಿಕಾರಿಗಳು ಸೂಚಿಸಿದ್ದ ಜಾಗದಲ್ಲಿ 10 ವರ್ಷಗಳಿಂದ ನಿರಾಶ್ರಿತರು ಆಶ್ರಯ ಪಡಿತಿದ್ದು, ಈಗ ಇದ್ದಕ್ಕಿಂದತೆ ಬಂದು ತೆರವು ಮಾಡ್ತಿರೋದು ಅಲ್ಲಿನ ನಿವಾಸಿಗಳ ಅಕ್ರೋಶಕ್ಕೆ ಕಾರಣವಾಗಿದೆ. ಇಷ್ಟೆಲ್ಲಾ ಆದ್ರೂ ನಗರಸಭೆ ಅಧಿಕಾರಿಗಳು ಮಾತ್ರ ಪ್ರಭಾವಿಗಳ ಮಾತಿಗೆ ಮಣಿದು ಯಾವುದೇ ನೋಟಿಸ್ ನೀಡ್ದೇ, ಪಕ್ಕದಲ್ಲಿರೋ ಶೀತಲವಾಗಿರೋ ಶೆಡ್‌ನಲ್ಲಿ ವಾಸಿಸುವಂತೆ ಮೌಖಿಕವಾಗಿ ಸೂಚಿಸಿದ್ದಾರಂತೆ. ಆದ್ರೆ ನಿರಾಶ್ರಿತರು ಮಾತ್ರ ಅಲ್ಲಿ ವಾಸ ಮಾಡಲು ಆಗೋದಿಲ್ಲ ಅಂತ ನಿರಾಶ್ರಿತರು ಕಾಲಾವಕಾಶ ಕೇಳ್ತಿದ್ರೂ ಮಾಲೀಕನ ಕಡೆಯವ್ರು ಶೆಡ್‌ಗಳನ್ನ ತೆರವು ಮಾಡಿ ನಿರಾಶ್ರಿತರನ್ನ ಬೀದಿಗೆ ನೂಕಿದ್ದಾರೆ.
ಒಟ್ಟಿನಲ್ಲಿ ನಿರಾಶ್ರಿತರನ್ನ ಅಲ್ಲಿಂದ ಆಶ್ರಯ ನೀಡಿ ಜಾಗ ಮಾಡಿಕೊಟ್ಟ ನಗರಸಭೆ ಈಗ ಜಮೀನು ಮಾಲೀಕನ ಒತ್ತಡಕ್ಕೆ ಸಿಲುಕಿ ನಿರಾಶ್ರಿತರನ್ನ ಬೀದಿಗೆ ನೂಕುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಹೇಳಿ.. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ನಿರಾಶ್ರಿತರ ಕಷ್ಟಗಳಿಗೆ ಸ್ಪಂದಿಸುವ ಕೆಲ್ಸ ಮಾಡ್ತಾರಾ ಕಾದು ನೋಡ್ಬೇಕಿದೆ.