ಗುಬ್ಬಿ : ಸ್ಥಳೀಯ ಚುನಾವಣೆ ನಡೆಸಲು ತಾಕತ್ತಿಲ್ಲ | ಸರ್ಕಾರದ ವಿರುದ್ಧ ಎಂ.ಟಿ ಕೃಷ್ಣಪ್ಪ ಕಿಡಿ

ಗುಬ್ಬಿ :

ಗುಬ್ಬಿ ತಾಲೂಕಿನ ಬೆನಕನಗೊಂದಿ, ಕೆ. ಕಲ್ಲಹಳ್ಳಿ, ನರಸಿಂಹದೇವರಹಟ್ಟಿ, ಅಡಿಕೆ ಕೆರೆ ಸೇರಿ ವಿವಿಧ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಶಾಸಕ ಎಂ.ಟಿ ಕೃಷ್ಣಪ್ಪ ಭೂಮಿ ಪೂಜೆ ನೆರವೇರಿಸಿದ್ರು. ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರಿಗೆ ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ ಗ್ರಾಮಸ್ಥರು ಸ್ವಾಗತ ಕೋರಿದ್ರು. ಈ ವೇಳೆ ಅನೇಕ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೇರಿಸಿದ್ರು. ಈ ವೇಳೆ ಮಾತನಾಡಿದ ಶಾಸಕ ಕೃಷ್ಣಪ್ಪ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಜಿಲ್ಲಾಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ತಾಕತ್ತಿಲ್ಲ ಎಂದು ಶಾಸಕ ಎಂ.ಟಿ ಕೃಷ್ಣಪ್ಪ ಕಿಡಿಕಾರಿದ್ರು. ಕಾಲ ಕಾಲಕ್ಕೆ ಸ್ಥಳೀಯ ಚುನಾವಣೆಗಳು ನಡೆಯದಿದ್ದರೆ ಸ್ಥಳೀಯ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಸಾಧ್ಯವಾಗ್ತಾ ಇತ್ತು, ಆದ್ರೆ ಸ್ಥಳೀಯ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಎಂ.ಟಿ ಕೃಷ್ಣಪ್ಪ ವಾಗ್ದಾಳಿ ನಡೆಸಿದರು.

ಇನ್ನು ತುಮಕೂರು ಜಿಲ್ಲೆಯ ಜನರಿಗೆ ಮರಣ ಶಾಸನವಾಗಿದ್ದ ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ಕೆನಾಲ್‌ ಕಾಮಗಾರಿಯನ್ನು ಹೋರಾಟದ ಮೂಲಕ ನಿಲ್ಲಿಸಲಾಗಿದೆ ಎಂದರು. 

ಈ ವೇಳೆ ಸ್ಥಳೀಯ ಬಿಜೆಪಿ ಮುಖಂಡರು, ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರು ಸೇರಿ ಹಲವು ಮಂದಿ ಉಪಸ್ಥಿತರಿದ್ದರು.

 

Author:

...
Keerthana J

Copy Editor

prajashakthi tv

share
No Reviews