Recipes :
ಭಾರತವು ತನ್ನ ವಿಭಿನ್ನ ಪಾಕಶಾಲೆಯ ಕಲೆಗಳಿಗೆ ಹೆಸರುವಾಸಿಯಾಗಿದೆ, ನೀವು ಭಾರತದಲ್ಲಿ ಪ್ರತಿ 100 ಕಿ.ಮೀ.ಗೆ ರುಚಿ ಮತ್ತು ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸುವ ವಿಧಾನದಲ್ಲಿ ಬದಲಾವಣೆಯನ್ನು ಕಾಣಬಹುದು. ಕರಾವಳಿ ಕರ್ನಾಟಕವು ಕಡಲತೀರಗಳು, ದೇವಾಲಯಗಳು ಮತ್ತು ಚರ್ಚ್‌ಗಳಂತಹ ಜನಪ್ರಿಯ ಪ್ರವಾಸಿ ತಾಣಗಳನ್ನು ಹೊಂದಿದ್ದು ಪರಂಪರೆ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತವಾಗಿದೆ. ಈ ಪ್ರದೇಶದಲ್ಲಿ ನೀವು ವಿವಿಧ ಖಾದ್ಯಗಳನ್ನು ಸೇವಿಸಬಹುದು. ಮನೆಯಲ್ಲೇ ಅತೀ ಸುಲಭವಾಗಿ ಪ್ರಾನ್ಸ್ ರವಾ ಪ್ರೈ ಮಾಡಲು ಬೇಕಾಗುವ ಪದಾರ್ಥಗಳೆಂದರೆ
- ಪ್ರಾನ್ಸ್ (ಸೀಗಡಿ) – 250 ಗ್ರಾಂ
- ಅರಿಶಿನ ಪುಡಿ – ½ ಟೀ ಸ್ಪೂನ್
- ಮೆಣಸಿನ ಪುಡಿ – 1 ಟೀ ಸ್ಪೂನ್
- ಜೀರಿಗೆ ಪುಡಿ – ½ ಟೀ ಸ್ಪೂನ್
- ಧನಿಯಾ ಪುಡಿ – 1 ಟೀ ಸ್ಪೂನ್
- ಇಂಗು – ಚಿಟಿಕೆ
- ಉಪ್ಪು – ರುಚಿಗೆ ತಕ್ಕಷ್ಟು
- ನಿಂಬೆಹಣ್ಣು ರಸ – 1 ಟೇಬಲ್ ಸ್ಪೂನ್
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
- ಅಕ್ಕಿ ಹಿಟ್ಟು – 1 ಟೇಬಲ್ ಸ್ಪೂನ್
- ರವೆ – ½ ಕಪ್
- ಎಣ್ಣೆ – ಬೇಯಿಸಲು ಬೇಕಾದಷ್ಟು
ಮಾಡುವ ವಿಧಾನ:
ಮೊದಲು ಸ್ವಚ್ಚಗೊಳಿಸಿದ ಪ್ರಾನ್ಸ್ ಗೆ ಅರಿಶಿನ ಪುಡಿ, ಮೆಣಸಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಇಂಗು, ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ನಿಂಬೆಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದನ್ನು ಕನಿಷ್ಟ 20-30 ನಿಮಿಷ ಮ್ಯಾರಿನೇಟ್ ಆಗಲು ಬಿಡಿ. ಪ್ರಾನ್ಸ್ ಚೆನ್ನಾಗಿ ಮಿಶ್ರಣ ಆದ ಮೇಲೆ, ಪ್ರತಿಯೊಂದು ಪ್ರಾನ್ಸ್ ತುಂಡುಗಳನ್ನು ಅಕ್ಕಿಹಿಟ್ಟು ಹಾಗೂ ರವೆ ಮಿಶ್ರಣದಲ್ಲಿ ಅದ್ದಿ. ತವಾಗೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಮಧ್ಯಮ ಉರಿಯಲ್ಲಿ ರವದಲ್ಲಿ ಅದ್ದಿದ ಪ್ರಾನ್ಸ್ ನ್ನು ಹಾಕಿ ಎರಡೂ ಬದಿಯು ಬಂಗಾರದ ಬಣ್ಣ ಬರುವವರೆಗೆ ಬಾಡಿಸಿ. ನಂತರ ತೆಗೆಯಬೇಕು. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪನಿಂದ ಅಲಂಕರಿಸಿ ಬಡಿಸಿ
ಪ್ರಾನ್ಸ್ ರವಾ ಪ್ರೈ ಅನ್ನು ಬಿಸಿ ಅನ್ನ, ಸಾಂಬಾರ್ ಅಥವಾ ಕೊಸಂಬರಿಯ ಮತ್ತು ಹಸಿರು ಚಟ್ನಿ ಜೊತೆ ಸವಿಯಬಹುದು.