IPL 2025 : ಆರ್ಸಿಬಿ ತಂಡವು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಐಪಿಎಲ್ 2025ರ ಅಂತಿಮ ಲೀಗ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಜಯವು ಆರ್ಸಿಬಿ ಪ್ಲೇಆಫ್ ಹಂತವನ್ನು ಪ್ರವೇಶಿಸಲು ಅವಕಾಶ ನೀಡಿದೆ. ಐಪಿಎಲ್ 2025 ರ 70 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇತಿಹಾಸ ನಿರ್ಮಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 228 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ಅದ್ಭುತ ಗೆಲುವು ಸಾಧಿಸಿದ್ದಲ್ಲದೆ, ಲೀಗ್ ಹಂತವನ್ನು ಅಗ್ರ-2 ರಲ್ಲಿ ಮುಗಿಸುವ ಮೂಲಕ ತಮ್ಮ ಪ್ಲೇಆಫ್ ಸ್ಥಾನವನ್ನು ಬಲಪಡಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ಪಂತ್ ಸಿಡಿಸಿದ ಶತಕದ ನೆರವಿನಿಂದ 227 ರನ್ಗಳಿಸಿತ್ತು. 228 ರನ್ಗಳ ಬೃಹತ್ ಗುರಿಯನ್ನ ಆರ್ಸಿಬಿ 18.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡುಕೊಂಡಿತು. ಇನ್ನು ನಾಯಕ ಜಿತೇಶ್ ಶರ್ಮಾ (ಅಜೇಯ 85), ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದರೆ, ಮಯಾಂಕ್ ಅಗರ್ವಾಲ್ ಅಜೇಯ 41 ರನ್ಗಳಿಸಿ ಆರ್ಸಿಬಿಗೆ 6 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು. ಅಲ್ಲದೆ ಆರ್ಸಿಬಿ ತನ್ನ ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ರನ್ ಚೇಸ್ ಮಾಡಿದ ದಾಖಲೆಯನ್ನು ಬರೆಯಿತು. ಇನ್ನು ಈ ಗೆಲುವಿನಿಂದ ಆರ್ಸಿಬಿ ತಂಡವು ಕ್ವಾಲಿಫೈಯರ್-1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಟಿಕೆಟ್ ಪಡೆದುಕೊಂಡಿದೆ.