ತುಮಕೂರು : ಅಪರಿಚಿತ ವ್ಯಕ್ತಿಯ ಶವ ಪತ್ತೆ | ಬೆಚ್ಚಿಬಿದ್ದ ಭಾರತಿನಗರದ ಜನ

ತುಮಕೂರು : ತುಮಕೂರು ನಗರದ ಭಾರತಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಇರುವ ಹಳ್ಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳಚೆ ನೀರಿನಲ್ಲಿ ಪತ್ತೆಯಾಗಿದೆ. ಶವವು ಸಂಪೂರ್ಣವಾಗಿ ಕೊಳೆಯುವ ಸ್ಥಿತಿಯಲ್ಲಿ ಇದ್ದು, ಸುಮಾರು 45 ರಿಂದ 50 ವರ್ಷದ ವಯಸ್ಸಿನ ಗಂಡಸಿನ ಶವ ಎನ್ನಲಾಗಿದೆ. ಪೌರಕಾರ್ಮಿಕರು ಕಸವನ್ನು ಸ್ವಚ್ಛಗೊಳಿಸುವ ವೇಳೆ ಕೊಳಚೆ ನೀರಿನಲ್ಲಿ ಬಿದ್ದಿದ್ದ ಶವನ್ನು ಕಂಡಿದ್ದಾರೆ.

ಇತ್ತ ಸ್ಥಳೀಯರು ತಕ್ಷಣ 112ಕ್ಕೆ ಕರೆ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೊಸ ಬಡವಾಣೆ (NEPS)ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವದ ಗುರುತು ಮತ್ತು ಸಾವಿನ ನಿಖರ ಕಾರಣ ಪತ್ತೆಹಚ್ಚಲು ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Author:

...
Keerthana J

Copy Editor

prajashakthi tv

share
No Reviews