ಮೊದಲ 2 ಪಂದ್ಯ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ನಲ್ಲಿ ಶುಭಾರಂಭ ಮಾಡಿದೆ. 3ನೇ ಪಂದ್ಯವನ್ನಾಡಲು ಬೆಂಗಳೂರಿಗೆ ಬಂದಿರುವ ಆರ್ಸಿಬಿ ಚಿನ್ನಸ್ವಾಮಿ ಮೈದಾನದಲ್ಲಿ ಅಭ್ಯಾಸ ಆರಂಭಿಸಿದೆ. ನಾಳೆ ಗುಜರಾತ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3ನೇ ಪಂದ್ಯವನ್ನು ಆಡಲಿದೆ.
ಸತತ ಎರಡು ಪಂದ್ಯಗಳನ್ನು ಗೆದ್ದು 2025 ರ ಐಪಿಎಲ್ನಲ್ಲಿ ಶುಭಾರಂಭ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ತನ್ನ ತವರಿನತ್ತ ಪ್ರಯಾಣ ಬೆಳೆಸಿದೆ. ಆಡಿರುವ ಮೊದಲೆರಡು ಪಂದ್ಯಗಳನ್ನು ತವರಿನಿಂದ ಹೊರಗೆ ಆಡಿದ್ದ ಆರ್ಸಿಬಿ, ಮೊದಲ ಪಂದ್ಯವನ್ನು ಕೆಕೆಆರ್ ವಿರುದ್ಧ ಅದರ ತವರು ನೆಲವಾದ ಕೋಲ್ಕತ್ತಾದಲ್ಲಿ ಆಡಿತ್ತು. ಆ ಬಳಿಕ ತನ್ನ ಎರಡನೇ ಪಂದ್ಯವನ್ನು ಸಿಎಸ್ಕೆ ವಿರುದ್ಧ ಅದರ ತವರು ನೆಲವಾದ ಚೆನ್ನೈನಲ್ಲಿ ಆಡಿತ್ತು. ಇದೀಗ ತನ್ನ ಮೂರನೇ ಪಂದ್ಯಕ್ಕೆ ಸಜ್ಜಾಗಿರುವ ಆರ್ಸಿಬಿ ತನ್ನ ತವರು ನೆಲವಾದ ಬೆಂಗಳೂರಿನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ ಸೆಣಸಾಟ ನಡೆಸಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಸಂಜೆ 7.30 ರಿಂದ ಪಂದ್ಯ ಆರಂಭವಾಗಲಿದೆ. ಅದಕ್ಕಾಗಿ ಆರ್ಸಿಬಿ ಭರ್ಜರಿ ತಯಾರಿ ನಡೆಸಿದೆ. ಎರಡು ಪಂದ್ಯಗಳನ್ನು ಆಡಿರುವ ಆರ್ಸಿಬಿ ಎರಡಲ್ಲೂ ಗೆದ್ದುಕೊಂಡಿರುವ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಒಂದು ಪಂದ್ಯದಲ್ಲಿ ಸೋತು, ಇನ್ನೊಂದು ಪಂದ್ಯದಲ್ಲಿ ಗೆದ್ದಿರುವ ಗುಜರಾತ್ ಟೈಟನ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನದಲ್ಲಿದೆ.