RBI : ಮೂರನೇ ಬಾರಿಗೆ ರೆಪೋ ದರ ಕಡಿತಕ್ಕೆ ನಿರೀಕ್ಷೆ ...!

NEWDELHI: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಂಬರುವ ಜೂನ್ 4ರಿಂದ 6ರ ವರೆಗೆ ನಡೆಯಲಿರುವ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು (bps) ಇಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

ಇದರಿಂದಾಗಿ ರೆಪೋ ದರ 6% ರಿಂದ 5.75%ಕ್ಕೆ ಇಳಿಯುವ ನಿರೀಕ್ಷೆಯಿದೆ. ಈ ವರ್ಷದಲ್ಲೇ ಇದು ಎರಡನೇ ಬಾರಿಗೆ ರೆಪೋ ದರ ಕಡಿತವಾಗಲಿದ್ದು, ರೆಪೋ ದರ ಇಳಿಕೆಯ ಲಾಭವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಿದರೆ, ಹೋಮ್‌ ಲೋನ್‌ ಮತ್ತು ವಾಹನ ಸಾಲ ಸೇರಿದಂತೆ ವಿವಿಧ ಸಾಲಗಳ ಇಎಂಐ [EMI] ಹೊರೆ ಕಡಿಮೆಯಾಗಲಿದೆ. ರೆಪೋ ದರ ಇಳಿಕೆಯಾದಾಗ ಬ್ಯಾಂಕ್‌ಗಳಿಗೆ ಸಾಲದ ವೆಚ್ಚ ಕಡಿಮೆ ಆಗುತ್ತದೆ. ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಅವಕಾಶ ಹೆಚ್ಚುತ್ತದೆ.

ಬೆಳೆಯುತ್ತಿರುವ ಆರ್ಥಿಕ ಬೆಳವಣಿಗೆಗೆ ದಿಟ್ಟ ಸಾಥ್ ನೀಡುವ ಉದ್ದೇಶದಿಂದಲೇ MPC ಈ ಕ್ರಮ ಕೈಗೊಂಡು ಸಾಧ್ಯತೆ ಇದೆ. ಫೆಬ್ರವರಿಯಲ್ಲಿ ಹಾಗೂ ಏಪ್ರಿಲ್‌ನಲ್ಲಿ ರೆಪೋ ದರ ಇಳಿದ ಪರಿಣಾಮ, ಪ್ರಮುಖ ಬ್ಯಾಂಕ್‌ಗಳು ಈಗಾಗಲೇ ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಿವೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ.

Author:

...
Sushmitha N

Copy Editor

prajashakthi tv

share
No Reviews