TUMKUR: ಮಂಡಿಪೇಟೆಯ ವರ್ತಕರಿಂದ ರಾಮಮಂದಿರ ವಾರ್ಷಿಕೋತ್ಸವ

tumkur ayodya sri rama mandira anniversary
tumkur ayodya sri rama mandira anniversary
ತುಮಕೂರು

ರಾಮಮಂದಿರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸೇರಿ ಮಂಡಿಪೇಟೆಯಲ್ಲಿರೋ ವರ್ತಕರು ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಶಿವಾನಂದ ಶಿವಾಚಾರ್ಯ ಶ್ರೀಗಳು, ರಾಮಾ ಬರೀ ದೇವರಲ್ಲ ನಮ್ಮೆಲ್ಲರ ಆದರ್ಶ.  ರಾಮ ತನ್ನ ತಂದೆ ದಶರಥ ಅವರ ತಾಯಿ ಕೈಕೆಗೆ ಕೊಟ್ಟ ಮಾತನ್ನು ನೆರವೇರಿಸದಿದ್ದರೆ ವಚನಭ್ರಷ್ಟ ಎಂಬ ಪಟ್ಟ ಬರುತ್ತದೆ. ತನ್ನ ತಂದೆ ತಾಯಿಗೆ ಕೊಟ್ಟ ಮಾತನ್ನು ನೆರವೇರಿಸಲು ಪಟ್ಟಾಭಿಷೇಕ ವಾಗುವ ಸಮಯದಲ್ಲೂ ಕೂಡ ಕಾಡಿಗೆ ಹೋದ ಆದ್ದರಿಂದಲೇ ರಾಮದೇವರದದ್ದು ಎಂದು ತಿಳಿಸಿದರು.

ಇನ್ನು ದಿನನಿತ್ಯ ವ್ಯಾಪಾರದಲ್ಲಿ ಬ್ಯುಸಿಯಾಗಿರುವ ಮಂಡಿಪೇಟೆಯ ಎಲ್ಲಾ ವರ್ತಕರು ಈ ದಿನ ತಮ್ಮ ಅಂಗಡಿಗಳಿಗೆ ಬೀಗಹಾಕಿ ರಾಮಮಂದಿರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.ಎಲ್ಲರೂ ಕೇಸರಿ ಶಾಲುಗಳನ್ನು ಹಾಕಿಕೊಂಡು ,ಖುಷಿಯಿಂದ ಬಂದಿದ್ದ ಎಲ್ಲರಿಗೂ ಪ್ರಸಾದ ಹಾಗೂ ,ಮಜ್ಜಿಗೆ ವಿತರಿಸಿ ಸಂಭ್ರಮಿಸಿದ್ರು.

Author:

...
Editor

ManyaSoft Admin

Ads in Post
share
No Reviews