farmers protestತುಮಕೂರು
ಲೋಡ್ ಶೆಡ್ಡಿಂಗ್ನಿಂದಾಗಿ ಕೈಗೆ ಬಂದ ಬೆಳೆಗೆ ನೀರಿಲ್ಲದೇ ಬೆಳೆಗಳು ನಾಶವಾಗ್ತಿದ್ದು, ಮೋಟರುಗಳು ಸುಟ್ಟು ಹೋಗ್ತಾ ಇವೆ.. ಇದ್ರಿಂದ ಕಂಗಾಲಾದ ರೈತರು ಅಧಿಕಾರಿಗಳಿಗೆ ಕರೆ ಮಾಡಿ ಅಳಲು ತೋಡಿಕೊಂಡ್ರೆ ಅವರು ಉಡಾಪೆಯಾಗಿ ಉತ್ತರ ನೀಡ್ತಾ ಇದ್ದಾರೆ ಎಂದು ಆಕ್ರೋಶಗೊಂಡ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.
ಇನ್ನು ರೈತರು ಪ್ರತಿಭಟನೆ ನಡೆಸಿ ಸುಮಾರು ಹೊತ್ತಾದ್ರು ಅಧಿಕಾರಿಗಳು ಬಂದು ವಿಚಾರಿಸದ ಕಾರಣ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶಹೊರಹಾಕಿದ್ರು.ಒಂದೊಂದು ಭಾಗದಲ್ಲಿ ಕರೆಂಟ್ ನಿಂದ ಆಗುತ್ತಿರುವ ತೊಂದರೆ ಮತ್ತು ಕರೆ ಮಾಡಿದಾಗ ಅಧಿಕಾರಿಗಳ ಹಾಗೂ ಲೈನ್ ಮ್ಯಾನ್ ಗಳ ಉಡಾಫೆ ಉತ್ತರಗಳ ಬಗ್ಗೆ ರೈತರು AEE ಮುಂದೆ ರೊಚ್ಚಿಗೆದ್ದರು.
ಪ್ರತಿಭಟನಾ ಸ್ಥಳಕ್ಕೆ ಬಂದ AEEರೈತರನ್ನು ಸಮಾಧಾನ ಪಡಿಸಿ ಅವರ ವಿವಿಧ ತೊಂದರೆಗಳ ಬಗ್ಗೆ 15 ದಿನಗಳಲ್ಲಿ ಸಭೆ ಮೂಲಕ ಚರ್ಚಿಸಿ ಬಗೆಹರಿಸುವುದಾಗಿ ಭರವಸೆ ಕೊಟ್ಟರು… ಅಲ್ದೇ ರೈತರ ಬಳಿ ಅನುಚಿತ ವರ್ತನೆ ಮಾಡಿದ ಸಹುದ್ಯೋಗಿಗಳ ಪರವಾಗಿ ಕ್ಷಮೆ ಯಾಚಿಸಿದರು..