CRICKET:
ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಭರ್ಜರಿ ಬ್ಯಾಟಿಂಗ್ ಬೀಸಿತ್ತು. ಆದ್ರೆ ಮುಂಬೈ ಇಂಡಿಯನ್ಸ್ ಮೇಲೆ ಮುಗ್ಗರಿಸಿ ಬಿದ್ದಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ವು. ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 217 ರನ್ ಬಾರಿಸಿತ್ತು.
218 ರನ್ ಗುರಿ ಬೆನ್ನತ್ತಿದ್ದ ರಾಜಸ್ಥಾನ್ ರಾಯಲ್ಸ್ 100 ರನ್ ಗಳ ಅಂತರದಿಂದ ಸೋತು ಸುಣ್ಣವಾಯ್ತು. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬರ್ಜರಿ ಗೆಲುವು ಕಂಡು ಸತತ 6 ನೇ ಜಯ ಸಾದಿಸಿದೆ.
ಕಳೆದ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ್ದ ವೈಭವ್ ಸೂರ್ಯವಂಶಿ ಡಕೌಟ್ ಆದ್ರೆ, ಯಶಸ್ವಿ ಜೈಸ್ವಾಲ್ 13 ರನ್ ಸಿಡಿಸಿ ಪೆವಿಲಿಯನ್ ಸೇರಿದ್ರು. ರಾಜಸ್ಥಾನ್ ರಾಯಲ್ಸ್ ತಂಡ 16.1 ಓವರ್ ನಲ್ಲಿ 117 ರನ್ ಗಳನ್ನ ಗಳಿಸಿ ಸೋಲೋಪ್ಪಿಕೊಂಡಿತ್ತು.ಇನ್ನು ಈ ಪಂದ್ಯ ಸೋಲೋ ಮೂಲಕ ಸಿಎಸ್‌ಕೆ ನಂತ್ರ ರಾಜಸ್ಥಾನ ರಾಯಲ್ಸ್ ತಂಡ ಪ್ಲೇ ಆಪ್ ನಿಂದ ಹೊರಬಿದ್ದಿದೆ.