ರಾಯಚೂರು:
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಮನೆಯೊಂದರಲ್ಲಿ ಕಳ್ಳರು ಮನೆಯ ಬೀಗ ಮುರಿದು 10 ಗ್ರಾಂ ಚಿನ್ನ ಮತ್ತು ಎರಡು ಲಕ್ಷ ರೂಪಾಯಿ ನಗದು ದೋಚಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ತಾಲೂಕಿನ ಪೋತ್ನಾಳ ಗ್ರಾಮದ ಲಕ್ಷ್ಮಿಕಾಂತ್ ಎಂಬುವರು ತಮ್ಮ ಕುಟುಂಬದೊಂದಿಗೆ ಪಕ್ಕದ ಊರಿನ ಜಾತ್ರೆಗೆ ಹೋಗಿದ್ದರು, ಇದನ್ನು ಗಮನಿಸಿದ ಕಳ್ಳರು ಮನೆಯಲ್ಲಿ ಯಾರೂ ಇಲ್ಲದನ್ನು ಖಚಿತಪಡಿಸಿಕೊಂಡು ಮನೆ ಬೀಗ ಮುರಿದು ಮನೆಗೆ ನುಗ್ಗಿ ಕೋಣೆಯಲ್ಲಿರುವ ಕಪಾಟಿನ ಬೀಗ ಮುರಿದು ಕಳ್ಳರು 10 ಗ್ರಾಂ ಚಿನ್ನ ಮತ್ತು ಎರಡು ಲಕ್ಷ ರೂ ನಗದು ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ.
ವಿಷಯ ತಿಳಿದ ಮನೆ ಮಾಲೀಕರು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ, ನಂತರ ಘಟನಾ ಸ್ಥಳಕ್ಕೆ ಪಿ.ಐ.ವಿಎಸ್ ಹೀರೆಮಠ್ ಅವರು ಹಾಗೂ ಶ್ವಾನದಳ ಪೊಲೀಸರು ಮತ್ತು ಬೆರಳಚ್ಚು ತಂತ್ರಜ್ಞರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಘಟನಾ ಕುರಿತು ಪ್ರಕರಣ ದಾಖಲಿಸಿದ್ದಾರೆ.