GUBBI: ಉಗ್ರರ ದಾಳಿ ಖಂಡಿಸಿ ಗುಬ್ಬಿಯಲ್ಲಿ ಪ್ರತಿಭಟನೆ

ಗುಬ್ಬಿ: 

ಜಮ್ಮು- ಕಾಶ್ಮಿರದ ಪಹಲ್ಗಾಮ್ ದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ನಡೆಸಿದರು. ಈ ದಾಳಿಯಲ್ಲಿ ಇದುವರೆವಿಗೂ ಸುಮಾರು 30 ಮಂದಿ  ಮೃತಪಟ್ಟಿದ್ದಾರೆ. ಉಗ್ರರ  ಅಟ್ಟಹಾಸವನ್ನು  ಖಂಡಿಸಿ  ಗುಬ್ಬಿಯಲ್ಲಿ  ಸಾರ್ವಜನಿಕರು  ಮೆಣದಬತ್ತಿ  ಹಿಡಿದು  ಪ್ರತಿಭಟನೆ  ನಡಸಿದರು.

ಗುಬ್ಬಿಯಲ್ಲಿ ಒಂದಾದ ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿರುವ ದಾಳಿಯಲ್ಲಿ ಇಬ್ಬರು ಕನ್ನಡಿಗರು ಮೃತಪಟ್ಟಿರುವುದು ವಿಷಾಧನೀಯ ಸಂಗತಿ.ಅಂತಹ ಉಗ್ರರನ್ನು ಗುಂಡಿಟ್ಟುಕೊಲ್ಲಬೇಕು ಎಂದು ಘೋಷಣೆಗಳನ್ನು ಕೂಗುತ್ತ, ಮೊಂಬತ್ತಿ ಹಿಡಿದು ಗುಬ್ಬಿಯ ಸರ್ಕಲ್‌ನಲ್ಲಿ ಸಾರ್ವಜನಿಕರು ದಾಳಿಯಲ್ಲಿ ಮೃತ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಕೋರಿ ಪ್ರತಿಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಶಿವಕುಮಾರ್, ಮುಖಂಡರಾದ ಕಾಂತರಾಜು, ಮಂಜುನಾಥ್, ಪ್ರೆಸ್ ಕುಮಾರ್, ರಂಗನಾಥ್, ದಯಾನಂದ್, ನಾಗರೀಕರು ಹಾಜರಿದ್ದರು. 

Author:

...
Keerthana J

Copy Editor

prajashakthi tv

share
No Reviews