ದೋಹಾ ನಡೆದ ಡೈಮಂಡ್ ಲೀಗ್ 2025 ಕೂಟದಲ್ಲಿ ನೀರಜ್ ಚೋಪ್ರಾ ಅವರು 90 ಮೀಟರ್ ಗಿಂತ ಹೆಚ್ಚು ದೂರ ಜಾವೆಲಿನ್ ಎಸೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ನೀರಜ್ ಚೋಪ್ರಾ 90 ಮೀಟರ್ ಗಡಿಯನ್ನು ದಾಟಿದ ಮೊದಲ ಭಾರತೀಯನಾಗಿದ್ದು, ಈ ಸಾಧನೆಯ ಮೂಲಕ ಭಾರತಕ್ಕೆ ಹೆಮ್ಮೆ ಮತ್ತು ಸಂತೋಷ ತಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ನೀರಜ್ ಚೋಪ್ರಾ ಸಾಧನೆಯನ್ನು ಟ್ವೀಟ್ ಮಾಡುವ ಮೂಲಕ ಶ್ಲಾಘಿಸಿದ್ದಾರೆ.
ನೀರಜ್ ಚೋಪ್ರಾ ಅವರ ಈ ಎಸೆತ 90.23 ಮೀಟರ್ನಷ್ಟು ಗಡಿ ದೂರ ಎಸೆದಿದ್ದು, ಈ ಸಾಧನೆ ಅವರ ಕ್ರೀಡಾ ಜೀವನದ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಸಾಧನೆಯು ನೀರಜ್ ಅವರ ಅವಿರತ ಪರಿಶ್ರಮ, ಶಿಸ್ತು ಮತ್ತು ಉತ್ಸಾಹ ಯಶಸ್ಸಿಗೆ ಕಾರಣ ಅಂತ ಪ್ರಧಾನಿ ಶ್ಲಾಘಿಸಿದ್ದಾರೆ.
2020ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಸ್ವರ್ಣಪದಕ ಜಯಿಸಿದ್ದ ಬಳಿಕವೂ, ನೀರಜ್ ತಮ್ಮ ಸಾಮರ್ಥ್ಯವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಬಂದಿದ್ದಾರೆ. ಈ ಐತಿಹಾಸಿಕ ಕ್ಷಣವು ಭಾರತೀಯ ಕ್ರೀಡಾ ಜಗತ್ತಿಗೆ ಹೊಸ ಪ್ರೇರಣೆಯಾಗಿ ಪರಿಣಮಿಸಿದೆ.