ಮತ್ತೊಂದು ದಾಖಲೆ ಬರೆದ ನೀರಜ್ ಚೋಪ್ರಾರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ..!

ದೋಹಾ ನಡೆದ ಡೈಮಂಡ್‌ ಲೀಗ್ 2025 ಕೂಟದಲ್ಲಿ ನೀರಜ್‌ ಚೋಪ್ರಾ ಅವರು 90 ಮೀಟರ್‌ ಗಿಂತ ಹೆಚ್ಚು ದೂರ ಜಾವೆಲಿನ್‌ ಎಸೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ನೀರಜ್‌ ಚೋಪ್ರಾ 90 ಮೀಟರ್‌ ಗಡಿಯನ್ನು ದಾಟಿದ ಮೊದಲ ಭಾರತೀಯನಾಗಿದ್ದು, ಈ ಸಾಧನೆಯ ಮೂಲಕ ಭಾರತಕ್ಕೆ ಹೆಮ್ಮೆ ಮತ್ತು ಸಂತೋಷ ತಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ನೀರಜ್‌ ಚೋಪ್ರಾ ಸಾಧನೆಯನ್ನು ಟ್ವೀಟ್‌ ಮಾಡುವ ಮೂಲಕ ಶ್ಲಾಘಿಸಿದ್ದಾರೆ.

ನೀರಜ್‌ ಚೋಪ್ರಾ ಅವರ ಈ ಎಸೆತ 90.23 ಮೀಟರ್‌ನಷ್ಟು ಗಡಿ ದೂರ ಎಸೆದಿದ್ದು, ಈ ಸಾಧನೆ ಅವರ ಕ್ರೀಡಾ ಜೀವನದ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಸಾಧನೆಯು ನೀರಜ್ ಅವರ ಅವಿರತ ಪರಿಶ್ರಮ, ಶಿಸ್ತು ಮತ್ತು ಉತ್ಸಾಹ ಯಶಸ್ಸಿಗೆ ಕಾರಣ ಅಂತ ಪ್ರಧಾನಿ ಶ್ಲಾಘಿಸಿದ್ದಾರೆ.

2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ವರ್ಣಪದಕ ಜಯಿಸಿದ್ದ ಬಳಿಕವೂ, ನೀರಜ್ ತಮ್ಮ ಸಾಮರ್ಥ್ಯವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಬಂದಿದ್ದಾರೆ. ಈ ಐತಿಹಾಸಿಕ ಕ್ಷಣವು ಭಾರತೀಯ ಕ್ರೀಡಾ ಜಗತ್ತಿಗೆ ಹೊಸ ಪ್ರೇರಣೆಯಾಗಿ ಪರಿಣಮಿಸಿದೆ.

Author:

...
Sushmitha N

Copy Editor

prajashakthi tv

share
No Reviews