ಕೊರಟಗೆರೆ:
ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿ ಪಂಚಾಯತ್ ವ್ಯಾಪ್ತಿಯ ಕೊಡ್ಲಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಪ್ರದೀಪ್, ಉಪಾಧ್ಯಕ್ಷರಾಗಿ ಸಿಎಸ್ ಲಕ್ಷ್ಮೀ ರಂಗಧಾಮಯ್ಯ ಅವಿರೋಧವಾಗಿ ಆಯ್ಕೆಯಾದರು.
ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರ ಡಾ.ಜಿ ಪರಮೇಶ್ವರ್ ಮಾರ್ಗದರ್ಶನದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ನಾರಾಯಣ್ ಮುಂದಾಳತ್ವದಲ್ಲಿ ಚುನಾವಣೆ ನಡೆಸದೆಯೇ ಅಧ್ಯಕ್ಷ ಹಾಗು ಉಪಾಧ್ಯಕ್ಷರನ್ನ ಆಯ್ಕೆ ಮಾಡಲಾಯಿತು.
ಈ ವೇಳೆ ಚುನಾವಣಾ ಅಧಿಕಾರಿ ಸಿ ಡಿ ಓ ಗುರುರಾಜ್, ಸೂಪರ್ವೈಸರ್ ಬೋರೇಗೌಡ, ಕೃಷಿಪತ್ತಿನ ಸಂಘದ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು. ಇನ್ನು ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯರಿಗೆ ಹೂವಿನ ಹಾರ ಹಾಕಿ, ಸಹಿ ಹಂಚಿ ಬೆಂಬಲಿಗರು ಶುಭಕೋರಿದರು.
ಈವೇಳೆಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ್ ಮಾತನಾಡಿ ವ್ಯವಸಾಯ ಸೇವಾ ಸಹಕಾರ ಸಂಘವನ್ನು ಗೃಹಸಚಿವ ಡಾ.ಜಿ.ಪರಮೇಶ್ವರ ಸಹಕಾರದಿಂದ ಅಭಿವೃದ್ಧಿಯತ್ತ ಮುನ್ನೇಡುಸುತ್ತೇವೆ ಎಂದರು. ನಂತರ ಉಪಾಧ್ಯಕ್ಷೆ ಲಕ್ಷ್ಮೀರಂಗಧಾಮಯ್ಯ ಮಾತನಾಡಿ ರೈತರ ಜೀವನಾಡಿ ಆಗಿರುವ ಕೋಡ್ಲಹಳ್ಳಿ ಕೃಷಿ ಸಂಘದಿಂದ ಅನುಕೂಲ ಆಗುವಂತೆ ಸಾಲಸೌಲಭ್ಯ ಕಲ್ಪಿಸುತ್ತೇವೆ ಎಂದರು.