ಪಾವಗಡ:
ಪಾವಗಡ ಪಟ್ಟಣದ ಪುರಸಭೆಯಲ್ಲಿ ಬಜೆಟ್ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು, ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪುರಸಭಾ ಅಧ್ಯಕ್ಷ ಪಿ.ಹೆಚ್ ರಾಜೇಶ್, ಉಪಾಧ್ಯಕ್ಷೆ ಗೀತಾ ಹನುಮಂತರಾಯಪ್ಪ, ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಸೇರಿ ಹಲವರು ಭಾಗಿಯಾಗಿದ್ದರು. ಸಭೆಯಲ್ಲಿ ಯಾವ ಯಾವ ಕ್ಷೇತ್ರಗಳಿಗೆ ವ್ಯಯಿಸುವ ಅನುದಾನಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಈ ವೇಳೆ ಪುರಸಭಾಧ್ಯಕ್ಷ ಪಿ. ಹೆಚ್ ರಾಜೇಶ್ ಮಾತನಾಡಿ, ಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ 22 ವಾಣಿಜ್ಯ ಸಂಕೀರ್ಣ ಅಂಗಡಿ ಮಳಿಗೆಗಳಿದ್ದು, ಜಿಲ್ಲಾಧಿಕಾರಿಗಳ ಆದೇಶದಂತೆ ಏಪ್ರಿಲ್ 3 ರಂದು ಮಳಿಗೆಗೆಳ ಬಹಿರಂಗ ಹರಾಜು ಮಾಡಲಾಗುವುದು ಎಂದರು, ಇನ್ನು ಈ ಪೂರ್ವ ಭಾವಿ ಸಭೆಯಲ್ಲಿ 2000 ಇಸವಿಯಲ್ಲಿ ನಡೆದ ಹರಾಜು ಸಂಬಂದ 38 ಜನರು ನ್ಯಾಯಾಲಯಕ್ಕೆ ಹೋಗಿದ್ದರು, ಅದರಲ್ಲಿ 26 ಪ್ರಕರಣಗಳು ಪುರಸಭೆ ಪರವಾಗಿ ಇತ್ಯರ್ಥಗೊಂಡಿದ್ದು, ಉಳಿದ 12 ಪ್ರಕರಣಗಳು ಮಾರ್ಚ್ 18 ರಂದು ನ್ಯಾಯಾಲಯದಲ್ಲಿ ನಿರ್ಧಾರವಾಗೋ ನಿರೀಕ್ಷೆ ಇದೆ ಎಂದರು.
ಇನ್ನು ಪಟ್ಟಣದಲ್ಲಿ ಪಾರ್ಕ್‌ಗಳ ಅಭಿವೃದ್ದಿಗೆ 30 ಲಕ್ಷ ಹಾಗೂ ಬಡಾವಣೆಗಳ ನಾಮಫಲಕಕ್ಕೆ 20 ಲಕ್ಷ, ಇಂದಿರಾ ಗಾಂಧಿ ಸರ್ಕಲ್ ಅಭಿವೃದ್ದಿಗೆ 20 ಲಕ್ಷ, ಪೌರ ಕಾರ್ಮಿಕರ ಶವ ಸಂಸ್ಕಾರಕ್ಕೆ 1 ಲಕ್ಷ, ಹಳೆಯ ಊರಿನ ಅಭಿವೃದ್ಧಿ ಸೇರಿ ಅಟೋ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯಧನ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು. ಮಾರ್ಚ್ 26 ರಂದು ಶಾಸಕರಾದ ಎಚ್.ವಿ. ವೆಂಕಟೇಶ್ ಮತ್ತು ಮಾಜಿ ಸಚಿವ ವೆಂಕಟರವಣಪ್ಪ ಭಾಗವಹಿಸಿ ನೂತನ ಪುರಸಭಾ ಸಭಾಂಗಣವನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.