ಶಿರಾ:
ಪ್ರಜಾಶಕ್ತಿ ಟಿವಿ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿ ಮಾಡ್ತಿದೆ. ತುಮಕೂರು ಜನರ ನಾಡಿ ಮಿಡಿತವಾಗಿ, ಹಳ್ಳಿ- ಹಳ್ಳಿಗಳ ಸಮಸ್ಯೆಗಳನ್ನು ವರದಿ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆಯುತ್ತಿದೆ. ವರದಿ ಬಿತ್ತರವಾದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಜನರ ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡ್ತಿದ್ದಾರೆ. ಇದೀಗ ಶಿರಾ ನಗರದ ಜನತೆಗೆ ನಿತ್ಯ ಕುಡಿಯುವ ನೀರನ್ನು ಪೂರೈಕೆ ಮಾಡುವ ದೊಡ್ಡ ಕೆರೆ ಅಕ್ಷರಶಃ ಹೂಳಿನಿಂದ ತುಂಬಿಕೊಂಡಿ̧ದ್ದು ಕೆರೆ ಜಲಸಂಗ್ರಹಣ ಪರಿಸರದ ಅವ್ಯವಸ್ಥೆಯ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ಮಾರ್ಚ್ 21 ರಂದು ಸುದ್ದಿ ಬಿತ್ತರಿಸಿತ್ತು. ವರದಿಯಾದ ತಕ್ಷಣವೇ ಶಾಸಕ ಟಿ ಬಿ ಜಯಚಂದ್ರ ಶಿರಾ ದೊಡ್ಡ ಕೆರೆ ಜಲಸಂಗ್ರಹಣ ಪ್ರದೇಶಕ್ಕೆ ಭೇಟಿ ನೀಡಿ ನಗರಸಭೆ ಅಧಿಕಾರಿಗಳಿಗೆ ಚಳಿ ಬಿಡಿಸಿ ಪರಿಹಾರಕ್ಕೆ ಮುಂದಾಗಿದ್ದಾರೆ.
ಶಿರಾ ದೊಡ್ಡ ಕೆರೆ ಹೂಳಿನಿಂದ ತುಂಬಿಕೊಂಡಿದ್ದು, ತ್ಯಾಜ್ಯ ವಿಲೇವಾರಿ ಘಟಕದಂತಾಗಿ ಬದಲಾಗಿದೆ. ಕೆರೆಗೆ ಮನೆಯ ಕಸ, ಕೋಳಿ ಮಾಂಸದ ತ್ಯಾಜ್ಯವನ್ನು ಕೂಡ ಸುರಿದು ಹೋಗುತ್ತಿದ್ದು ಗಬ್ಬು ನಾರುವಂತಹ ಸ್ಥಿತಿ ನಿರ್ಮಾಣ ಆಗಿದೆ. ಇದ್ರಿಂದ ಕೆರೆಯ ಬಳಿ ಸೊಳ್ಳೆ, ಹಂದಿಗಳ ಕಾಟ ಹೆಚ್ಚಾಗಿದೆ. ಜೊತೆಗೆ ಕೆರೆಯ ನೀರು ಕಲುಷಿತಗೊಂಡಿದ್ದು ದುರ್ವಾಸನೆ ಬೀರುತ್ತಿದೆ. ಹೀಗಾಗಿ ಶಿರಾ ದೊಡ್ಡ ಕೆರೆಯ ದುಸ್ಥಿತಿಯನ್ನ ಪ್ರಜಾಶಕ್ತಿ ಟಿವಿ ವಿಸ್ತೃತವಾಗಿ ವರದಿ ಬಿತ್ತರಿಸಿತ್ತು. ವರದಿ ಮಾಡಿದ 3 ದಿನಗಳಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಸೋಮವಾರ ಸಂಜೆ ಶಾಸಕ ಟಿ.ಬಿ.ಜಯಚಂದ್ರ ಶಿರಾ ಹೇಮಾವತಿ ಜಲಸಂಗ್ರಣ ದೊಡ್ಡ ಕೆರೆಗೆ ಭೇಟಿ ನೀಡಿ ಅಲ್ಲಿಯ ಅವ್ಯವಸ್ಥೆಯನ್ನು ಕಂಡು ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಚಳಿಬಿಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಜೆಸಿಬಿಯೊಂದಿಗೆ ದೌಡಾಯಿಸಿ ಅಧಿಕಾರಿಗಳು ಕೆರೆಯ ಸ್ವಚ್ಛತೆಗೆ ಮುಂದಾಗಿದ್ದಾರೆ.
ಶಿರಾ ಹೇಮಾವತಿ ಜಲಸಂಗ್ರಹಣ ದೊಡ್ಡ ಕೆರೆಯ ಅಸ್ವಚ್ಛತೆ ಬಗ್ಗೆ ಹಲವು ಬಾರಿ ಮನವಿ ಮಾಡಿದ್ರೂ ಕ್ಯಾರೆ ಅಂದಿರಲಿಲ್ಲ. ಇದೀಗ ಪ್ರಜಾಶಕ್ತಿ ಟಿವಿಯ ವರದಿ ಬೆನ್ನಲ್ಲೇ ಶಾಸಕರು ಭೇಟಿ ನೀಡಿ ಅಧಿಕಾರಿಗಳಿಗೆ ಚಳಿಬಿಡಿಸಿದ ಹಿನ್ನೆಲೆ, ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡಿದ್ದು ಸ್ಥಳೀಯರು ಪ್ರಜಾಶಕ್ತಿ ಟಿವಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.