ಮಧುಗಿರಿ :
ಪ್ರಜಾಶಕ್ತಿ ಟಿವಿ ಎಂದಿಗೂ ಸುದ್ದಿ ಮಾಡಿ ಸುಮ್ಮನೆ ಇರಲ್ಲ, ಸಮಸ್ಯೆಗಳ ಬಗ್ಗೆ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಗಮನ ಸೆಳೆಯುತ್ತಿದೆ. ಹೀಗಾಗಿಯೇ ಪ್ರಜಾಶಕ್ತಿ ಟಿವಿ ಪ್ರಾರಂಭವಾಗಿ ಕಡಿಮೆ ಅವಧಿಯಲ್ಲಿಯೇ ಬಹುಬೇಗ ಜನರ ಗಮನ ಸೆಳೆದಿದೆ. ಹೌದು ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಿಗದ ಹಿನ್ನೆಲೆ ಚಿಕಿತ್ಸೆಗಾಗಿ ಶಿರಾ ತಾಲೂಕು ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದರು. ಈ ಬಗ್ಗೆ ಪ್ರಜಾಶಕ್ತಿ ಟಿವಿಯಲ್ಲಿ ಆಸ್ಪತ್ರೆಯಲ್ಲಿಲ್ಲ ಉತ್ತಮ ಸೇವೆ ಶಿರಾ ಕಡೆ ಮುಖ ಮಾಡಿದ ರೋಗಿಗಳು ಎಂಬ ಶೀರ್ಷಿಕೆಯಡಿ ವರದಿ ಮಾಡಿತ್ತು.
ವರದಿ ಪ್ರಸಾರದ ಬೆನ್ನಲ್ಲೇ ಎಚ್ಚೆತ್ತ DHO ಡಾ.ಚಂದ್ರಶೇಖರಯ್ಯ, ದಿಢೀರ್ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಿಗೆ ತಿಂಗಳಿಗೊಮ್ಮೆ ಖುದ್ದು ನಾನೇ ಭೇಟಿ ನೀಡುತಿದ್ದೇನೆ. ಮುಂದಿನ ದಿನಗಳಲ್ಲಿ MBBS ಓದುವ ಮಕ್ಕಳನ್ನು ಶಿರಾ ಮತ್ತು ಮಧುಗಿರಿಗೆ ತರಲು ಪ್ರಯತ್ನ ಮಾಡುತಿದ್ದೇನೆ. ತಾಲೂಕು ಆಸ್ಪತ್ರೆಗಳಿಗೆ ಹೆರಿಗೆಗೆ ಬಂದವರನ್ನು ರೆಫರ್ ಮಾಡುವ ಹಾಗಿಲ್ಲ. ಇಂತಹ ಘಟನಗಳು ಮರಕಳಿಸಿದಂತೆ ಕ್ರಮ ಕೈಗೊಳ್ಳುತ್ತೇನೆ ತಿಳಿಸಿದ್ದಾರೆ.
ಮಧುಗಿರಿ ಆಸ್ಪತ್ರೆಯ ಹೆರಿಗೆ ಅಂಕಿ ಅಂಶ ಗಮನಿಸಿದ್ದೇನೆ. ಪಿ.ಅರ್.ಎಸ್ ಮೀಟಿಂಗ್ ನಲ್ಲಿ ಪ್ರೋಗ್ರೇಸ್ ಕಡಿಮೆ ಇದೆ ಎಂಬುದು ತಿಳಿದು ಬಂದಿದ್ದು ಈ ಬಗ್ಗೆ ಮಾಹಿತಿ ಕೇಳಿದ್ದೇನೆ. ಆಸ್ಪತ್ರೆಯ ಸಮಸ್ಯೆಗಳನ್ನು ಪರಿಶೀಲಿಸಿದ್ದು ಇಲ್ಲಿ ವೈದ್ಯರ ಮತ್ತು ಫಾರ್ಮಸಿಸ್ಟ್ ಕೊರತೆ ಇದೆ. ನೂತನ ಪ್ರಸೂತಿ ತಜ್ಞರನ್ನು ನೇಮಕ ಮಾಡಲಾಗಿದೆ ಅವರು ಬಂದ ನಂತರ ಸಮಸ್ಯೆ ಎದುರಾಗುವುದಿಲ್ಲ ಎಂಬ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಒಟ್ನಲ್ಲಿ ಪ್ರಜಾಶಕ್ತಿ ವರದಿಗೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ಮಧುಗಿರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸುವ ಭರವಸೆಯನ್ನು ಡಿಎಚ್‌ಒ ನೀಡಿದ್ದು, ಸಾರ್ವಜನಿಕರು ಪ್ರಜಾಶಕ್ತಿ ಟಿವಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.