ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರದ ಯಂಗ್ ಅಂಡ್ ಎನರ್ಜೆಟಿಕ್ ಅಂದ್ರೆ ಅದು ಬೇರಾರು ಅಲ್ಲ ಪ್ರದೀಪ್ ಈಶ್ವರ್. ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರೋ ವ್ಯಕ್ತಿ. ಮಾಜಿ ಸಚಿವ ಡಾ.ಸುಧಾಕರ್ ಅಂತ ಘಾನುಘಟಿ ನಾಯಕನನ್ನೆ ಸೋಲಿಸಿ ಅಧಿಕಾರಿ ಹಿಡಿದಿದ್ರು. ಗೆದ್ದ ನಂತರ ಜಿಲ್ಲೆಯಾದ್ಯಂತ ಪ್ರತಿ ತಾಲೂಕು, ಗ್ರಾಮಕ್ಕೆ ವಿಸಿಟ್ ಕೊಟ್ಟು ಜನರೊಂದಿಗೆ ಸಮಸ್ಯೆಗಳ ಕುರಿತು ಚರ್ಚೆ ಮಾಡಿ ಬಗೆಹರಿಸೋ ಕೆಲ್ಸ ಮಾಡ್ತಾರೆ.
ಇಂದು ಚಿಕ್ಕಬಳ್ಳಾಪುರ ನಗರದ 8 ನೇ ವಾರ್ಡ್ಗೆ ಅಧಿಕಾರಿಗಳೊಂದಿಗೆ ವಿಸಿಟ್ ಕೊಟ್ರು. ವಾರ್ಡ್ನಲ್ಲಿ ನೀರಿನ ಸಮಸ್ಯೆ, ಚರಂಡಿ ಸಮಸ್ಯೆ, ಡ್ರೈನೆಜ್ ಸಮಸ್ಯೆ, ಮಕ್ಕಳ ಶಿಕ್ಷಣ, ಆರೋಗ್ಯ, ಹಿರಿಯ ಆರೋಗ್ಯ, ಪಿಂಚಣಿ ವ್ಯವಸ್ಥೆ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ರು. ಇನ್ನು ಕೆಲವು ಸಮಸ್ಯೆಗಳಿಗೆ ಅಲ್ಲೆ ಪರಿಹರಿಸುವ ಕೆಲಸ ಮಾಡಿದರು.
ಇನ್ನು ಇದೇ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಕುರಿತಾಗಿ ಮಾನಾಡಿದ ಅವರು, ಉಗ್ರರ ದಾಳಿಯಿಂದ 27 ಜನ ಸಾವನ್ನಪ್ಪಿದ್ದಾರೆ. ಇದು ಬಹಳಷ್ಟು ಬೇಸರದ ವಿಚಾರ. ಇದರಲ್ಲಿ ರಾಜಕೀಯವಾಗಿ ಯಾರನ್ನು ಬಯ್ಯೂವುದು, ಹೊಗುಳುವುದು ಬೇಡ. ನನಗೆ ಇಂಡಿಯನ್ ಆರ್ಮಿ ಮೇಲೆ ನಂಬಿಕೆ ಇದೆ. ಆ ಕೃತ್ಯಕ್ಕೆ ಯಾರು ಕಾರಣವಾಗಿದ್ದಾರೆ ಅವರನ್ನು ಇಂಡಿಯನ್ ಆರ್ಮಿ ಉಡಾಯಿಸುತ್ತಾರೆ ಎಂದರು.