ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಶಾಂತಯುತವಾಗಿದ್ದ ಕಾಂಗ್ರೆಸ್ ನಲ್ಲಿ ಈಗ ಅಕ್ಷರಶಃ ಬಂಡಾಯದ ಕೂಗು ಕೇಳಿ ಬರ್ತಿದೆ. ಕಾಂಗ್ರೆಸ್ನಲ್ಲಿಯೇ ಒಂದು ಗುಂಪು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ತಿರುಗಿಬಿದ್ದಿದೆ. ಇದರಿಂದ ಕಾಂಗ್ರೆಸ್ನಲ್ಲಿ ಅಲ್ಲೋಲ ಕಲ್ಲೋಲವೇ ಉಂಟಾಗ್ತಿದೆ. ಕಾಂಗ್ರೆಸ್ನಲ್ಲಿರುವ ಹಿರಿಯ ಮುಖಂಡರಿಗೆ ಪ್ರದೀಪ್ ಈಶ್ವರ್ ಬೆಲೆ ಕೊಡ್ತಿಲ್ಲ, ಸಭೆ ಸಮಾರಂಭಗಳಲ್ಲೂ ಅವರನ್ನು ಸರಿಯಾಗಿ ಕಾಣ್ತಿಲ್ಲ, ಹಿರಿಯರನ್ನು ಕಡೆಗಣಿಸುತ್ತಿದ್ದಾರೆ ಅನ್ನೋ ಅಸಮಾಧಾನ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಅನೇಕ ಹಿರಿಯ ಮುಖಂಡರು ಗೌಪ್ಯ ಸಭೆಗಳನ್ನು ನಡೆಸ್ತಾ ಇದಾರೆ. ಇತ್ತ ಪ್ರದೀಪ್ ಈಶ್ವರ್ ಟೈಟ್ ಸೆಕ್ಯೂರಿಟಿಯೊಂದಿಗೆ ನಮ್ಮೂರಿಗೆ ನಮ್ಮ ಶಾಸಕರು ಕಾರ್ಯಕ್ರಮವನ್ನು ಮಾಡ್ತಾರೆ ಇದಾರೆ. ಆದರೆ ಕಾರ್ಯಕ್ರಮಕ್ಕೆ ಟೈಟ್ ಸೆಕ್ಯೂರಿಟಿಯನ್ನು ನೀಡಲಾಗಿದೆ. ಈ ಟೈಟ್ ಸೆಕ್ಯೂರಿಟಿ ಕಂಡು ಒಂದು ಕಡೆ ಗ್ರಾಮಸ್ಥರು ಶಾಕ್ ಆದರೆ, ಮತ್ತೊಂದು ಕಡೆ ವಿಪಕ್ಷಗಳ ಬಾಯಿಗೆ ಆಹಾರವಾಗ್ತಿದ್ದಾರೆ ಎನ್ನಲಾಗ್ತಿದೆ.
ಚಿಕ್ಕಬಳ್ಳಾಪುರದ ಕಾಂಗ್ರೆಸ್ನಲ್ಲಿ ಏನೇನು ಸರಿಯಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ. ಎರಡು ಗುಂಪುಗಳಾಗಿರುವ ಕಾಂಗ್ರೆಸ್ನಲ್ಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಅಸಮಾಧಾನದ ಹೊಗೆ ಹೆಚ್ಚಾಗ್ತಿದೆ. ಒಂದು ಗುಂಪು ಮೀಟಿಂಗ್ ಮೇಲೆ ಮೀಟಿಂಗ್ ಮಾಡ್ತಿದೆ. ಇತ್ತೀಚೆಗೆ ತಾನೇ ಕಾಂಗ್ರೆಸ್ ಮುಖಂಡರಲ್ಲೇ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಶಾಸಕ ಪ್ರದೀಪ್ ಈಶ್ವರ್ ಟೈಟ್ ಸೆಕ್ಯೂರಿಟಿಯೊಂದಿಗೆ ನಮ್ಮೂರಿಗೆ ನಮ್ಮ ಶಾಸಕರು ಕಾರ್ಯಕ್ರಮ ಮಾಡ್ತಿದಾರೆ ಎನ್ನಲಾಗಿದೆ. ಸ್ವಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರ ಅಸಮಾಧಾನ ಹಿನ್ನಲೆ ಹೈಅಲರ್ಟ್ ಮಾಡಲಾಗಿದೆ. ಈ ಕಾರಣಕ್ಕೆ ಶಾಸಕರ ಕಾರ್ಯಕ್ರಮಗಳಿಗೆ ಬಿಗಿ ಬಂದೋಬಸ್ತ್ ನೀಡಲಾಗುತ್ತಿದೆ.
ಇಂದು ಕೂಡ ಚಿಕ್ಕಬಳ್ಳಾಪುರ ಮಂಚೇನಹಳ್ಳಿ ತಾಲೂಕಿನ ಜರಬಂಡಹಳ್ಳಿ, ಪಿಡಚಲಹಳ್ಳಿ ಗ್ರಾಮಗಳಿಗೆ ಶಾಸಕ ಭೇಟಿ ನೀಡಿದ್ದು, ಈ ಗ್ರಾಮಗಳಲ್ಲಿ ನಮ್ಮೂರಿಗೆ ನಮ್ಮ ಶಾಸಕರು ಕಾರ್ಯಕ್ರಮವನ್ನು ನಡೆಸಲಾಯಿತು. ಈ ವೇಳೆ ಗ್ರಾಮಕ್ಕೆ ಬಂದ ಶಾಸಕ ಟೈಟ್ ಸೆಕ್ಯೂರಿಟಿ ಕಂಡು ಗ್ರಾಮಸ್ಥರು ಶಾಕ್ ಆಗಿದ್ದಾರೆ. ಸುಮಾರು 70 ಪೊಲೀಸರ ಬಿಗಿ ಬಂದೋಬಸ್ತ್ನೊಂದಿಗೆ ಶಾಸಕ ಪ್ರದೀಪ್ ಈಶ್ವರ್ಗೆ ಬಂದಿದ್ದರು. ಪೊಲೀಸರ ಬಂದೋಬಸ್ತ್ನೊಂದಿಗೆ ಮನೆ ಮನೆಗೂ ಭೇಟಿ ನೀಡಿ ಜನರ ಸಮಸ್ಯೆಯನ್ನು ಆಲಿಸಿದ್ದರು. ಇನ್ನು ಮನೆಗೆ ಬಂದಂತಹ ಶಾಸಕರಿಗೆ ಹೆಣ್ಣು ಮಕ್ಕಳು ಆರತಿ ಎತ್ತುವ ಮೂಲಕ ಸ್ವಾಗತಿಸಿದ್ದರು. ಮನೆಯಲ್ಲಿಯೇ ಚಾಪೆ ಮೇಲೆಯೇ ಕೂತ ಶಾಸಕರು ಅವರ ಸಮಸ್ಯೆಯನ್ನು ಆಲಿಸಿದರು. ಇನ್ನು ಶಾಸಕರ ಆಗಮನಕ್ಕೆ ಗ್ರಾಮಗಳಲ್ಲಿ ಜನರು ಮುಗಿಬಿದ್ದಿದ್ದರು. ತಮ್ಮ ಸಮಸ್ಯೆಯನ್ನು ಶಾಸಕರ ಬಳಿ ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಕಾಂಗ್ರೆಸ್ ಈಗ ಹೊಡೆದ ಮನೆಯಂತಾಗಿದೆ. ಒಂದೆಡೆ ಹಿರಿಯ ಮುಖಂಡರ ಅಸಮಾಧಾನದ ಕೂಗು ಕೇಳಿ ಬರ್ತಿದೆ. ಇನ್ನೊಂದೆಡೆ ಟೈಟ್ ಸೆಕ್ಯೂರಿಟಿಯೊಂದಿಗೆ ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮಗಳಿಗೆ ಎಂಟ್ರಿ ಕೊಡುವಂತಾಗಿದೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ನಿಜವಾಗಲೂ ಹೊಡೆದು ಹೋಗುತ್ತಾ. ಇಲ್ಲ ಭುಗಿಲೆದ್ದಿರುವ ಅಸಮಾಧಾನಕ್ಕೆ ರಾಜ್ಯ ನಾಯಕರು ಎಂಟ್ರಿ ಕೊಟ್ಟು ಶಮನ ಮಾಡ್ತಾರಾ ಕಾದು ನೋಡಬೇಕಿದೆ.