ಚಿಕ್ಕಬಳ್ಳಾಪುರ:
ನಮ್ಮ ಊರಿಗೆ ನಮ್ಮ ಶಾಸಕ ಅನ್ನೋ ಹೊಸ ಐಡಿಯಾಲಜಿ ಮೂಲಕ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ವಿದಾನಸಭಾ ಕ್ಷೇತ್ರದಾದ್ಯಂತ ಗ್ರಾಮ ಗ್ರಾಮಗಳಿಗೆ ಅಧಿಕಾರಿಗಳ ಜೊತೆ ತೆರಳಿ ಜನರ ಸಮಸ್ಯೆಗಳನ್ನ ಆಲಿಸ್ತಾ ಇದಾರೆ. ಜೊತೆಗೆ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ ಮಾಡಿ ಆದಷ್ಟು ಬೇಗ ನಿರ್ಮಿಸೋದಾಗಿ ಭರವಸೆ ನೀಡಿದ್ರು. ಇನ್ನು ಗ್ರಾಮಕ್ಕೆ ಶಾಸಕ ಬರುತ್ತಿದ್ದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ ಹೂವಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು.
ತಾಲ್ಲೂಕಿನ ಕೇತನಹಳ್ಳಿ, ಅನೇಮಡಗು, ಕೊತ್ತೂರು, ಸಾದೇನಹಳ್ಳಿ ಗ್ರಾಮಗಳಿಗೆ ತೆರಳಿ, ಗ್ರಾಮಸ್ಥರ ಸಮಸ್ಯೆಗಳನ್ನ ಆಲಿಸಿದ್ದು, ಗ್ರಾಮಗಳಲ್ಲಿನ ರಸ್ತೆ, ಚರಂಡಿ, ಸಾರಿಗೆ, ನೆಟ್ವರ್ಕ್ ಸಮಸ್ಯೆ, ಜಮೀನು, ನಿವೇಶನಗಳ ವಿವಾದ ಸೇರಿದಂತೆ ಹಲವು ಪಡೆದು, ಸ್ಥಳದಲ್ಲೇ ಸಂಬಂದಪಟ್ಟ ಇಲಾಖಾ ಅಧಿಕಾರಿಗಳಿಂದ ಪರಿಹಾರ ಕಂಡುಕೊಂಡು ಸಮಸ್ಯೆಗಳನ್ನ ಬಗೆಹರಿಸಿದ್ರು. ಅಲ್ದೇ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ತಾನು ಯಾವತ್ತಿದ್ರೂ ದಲಿತರ ಪರ,ದಲಿತರ ಸಮಸ್ಯೆಗಳನ್ನ ಬಗೆಹರಿಸೋದೆ ತನ್ನ ಪರಮ ಗುರಿ ಎಂದು ತಿಳಿಸಿದರು.
ಇನ್ನು ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ ಸಚಿವ ಸಂಪುಟ ವಿಸ್ತರಣೆ ಪಕ್ಷಕ್ಕೆ ಬಿಟ್ಟಿದ್ದು, ನಾನಂತೂ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದ್ರು, ಈ ಐದು ವರ್ಷದಲ್ಲಿ ಅದ್ರ ಅವಶ್ಯಕತೆ ನನಗಿಲ್ಲಾ, ಎಂಎಲ್ ಎ ಆಗಿ ಮಾಡುವ ಕೆಲಸಾನೇ ಹೆಚ್ಚಿದೆ ಅಂದ್ರು, ಅಲ್ದೇ ಮಿನಿಸ್ಟರ್ ಪೋಸ್ಟ್ ಈಗಲೇ ನಿರ್ವಹಿಸುವ ಶಕ್ತಿ ನನಗಿಲ್ಲ, ಆಸೆ ಇರಬಹುದೇನೋ ಆದ್ರೆ ಶಕ್ತಿ ನನಗಿಲ್ಲ ಎಂದ್ರು, ಇನ್ನು ಕೇಂದ್ರ ಸರ್ಕಾರದ ವಕ್ಫ್ ಬೋರ್ಡ್ ಮಂಡನೆ ತೀರ್ಮಾನವನ್ನು ತಿರಸ್ಕರಿಸುತ್ತೇನೆ, ಮುಸ್ಲಿಂ ವಿರೋಧಿ ಬಿಲ್, ನಾನು ಒಪ್ಪೊದಿಲ್ಲ ಯಾಕಂದ್ರೆ, ಮುಸ್ಲಿಂ ಬಾಂಧವರು ನಮ್ಮ ದೇಶದವರು ಕೇಂದ್ರ ಸರ್ಕಾರಕ್ಕೆ ಅವರ ಪರ ನಿಲ್ಲುವ ಯೋಗ್ಯತೆ ಇಲ್ಲ ಎಂದರು.