ಬಾಹುಬಲಿ ಸಿನಿಮಾ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ತೆಲುಗು ನಟ ಪ್ರಭಾಸ್ ಕೊನೆಗೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಹಲವು ಬಾರಿ ಪ್ರಭಾಸ್ ಮದುವೆ ವದಂತಿಗಳು ಬಂದಿದ್ದರೂ ಪ್ರಭಾಸ್ ಮಾತ್ರ ಸಿನಿಮಾ ಕಡೆ ಗಮನ ಹರಿಸಿದ್ದರು.
ಸ್ಟಾರ್ ನಟ ಪ್ರಭಾಸ್ ಮದುವೆ ಯಾವಾಗ? ಎಂದು ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಡಾರ್ಲಿಂಗ್ ಬ್ಯುಸಿಯಾಗಿಬಿಟ್ಟಿದ್ದಾರೆ. ವಯಸ್ಸು 40 ದಾಟಿದರೂ ಪ್ರಭಾಸ್ ಮಾತ್ರ ಮದುವೆ ಬಗ್ಗೆ ಆಲೋಚಿಸಿದಂತೆ ಕಾಣುತ್ತಿಲ್ಲ. ಇದೀಗ ದಿಢೀರನೆ ಮತ್ತೆ ಬಾಹುಬಲಿ ಮದುವೆ ವಿಚಾರ ಚರ್ಚೆಗೆ ಬಂದಿದೆ.
ಪ್ರಭಾಸ್ ಸಾಲು ಸಾಲು ಸಿನಿಮಾ ಶೂಟಿಂಗ್ಗಳಲ್ಲಿ ಬ್ಯುಸಿಯಾಗಿದ್ದು ಮೋಸ್ಟ್ ಬ್ಯಾಚುಲರ್ ಆಗಿದ್ದಾರೆ. ಅಲ್ದೇ ಡಾರ್ಲಿಂಗ್ಗೆ 45 ವರ್ಷಗಳು ತುಂಬಿದ್ರೂ ಅವರಿಗೆ ಕಂಕಣಭಾಗ್ಯ ಮಾತ್ರ ಇಲ್ಲ ಅಂತ ಹೇಳಲಾಗುತ್ತಿತ್ತು. ಆದ್ರೆ ಇದಕ್ಕೆ ಫುಲಿಸ್ಟಾಪ್ ಬೀಳುವ ಸಂಭವ ಬಂದಿದ್ದು ಡಾರ್ಲಿಂಗ್ ಪ್ರಭಾಸ್ ವಿವಾಹ ಆಗೋ ಕಾಲ ಕೂಡಿ ಬಂದಿದೆ ಅಂತ ಹೇಳಲಾಗ್ತಿದ್ದು. ಹೈದರಾಬಾದ್ನ ದೊಡ್ಡ ಉದ್ಯಮಿಯ ಮಗಳನ್ನು ಪ್ರಭಾಸ್ ಹಸೆಮಣೆ ಏರಲಿದ್ದಾರಂತೆ. ಪ್ರಭಾಸ್ ಚಿಕ್ಕಮ್ಮ ಶ್ಯಾಮಲಾ ದೇವಿ ಅವರು ಹುಡುಗಿಯನ್ನು ನೋಡಿ ಆಯ್ಕೆ ಮಾಡಿದ್ದಾರೆ ಎನ್ನುವ ಮಾತುಗಳು ತೆಲುಗು ಸಿನಿ ರಂಗದಲ್ಲಿ ಭಾರೀ ಸದ್ದು ಮಾಡ್ತಿದೆ. ಚಿಕ್ಕಮ್ಮ ಹುಡುಗಿಯನ್ನು ನೋಡಿದ ಮೇಲೆಯೇ ಪ್ರಭಾಸ್ ಮದುವೆಯ ಸಿದ್ಧತೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಪ್ರಭಾಸ್ ಮದುವೆಯಾಗ್ತಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.