ಹಾಸನ:
ದೇವಸ್ಥಾನಕ್ಕೆ ಸೇರಿದ ಜಾಗವನ್ನು ಅಕ್ರಮವಾಗಿ ಖಾತೆ ಮಾಡಿದ್ದಾರೆ ಅನ್ನೋ ಆರೋಪದ ಹಿನ್ನಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿರುವಂತಹ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಗ್ರಾಮದ ಆಂಜನೇಯಸ್ವಾಮಿ ದೇಗುಲದ ಜಾಗದ ಖಾತೆ ಆರೋಪಕ್ಕೆ ಸಂಬಂಧಪಟ್ಟಂತೆ ಮಹಿಳಾ ಹಾಲೂ ಉತ್ಪಾದಕ ಸಂಘಕ್ಕೆ ಜಾಗದ ಖಾತೆ ಮಾಡಿಕೊಟ್ಟಿದ್ದಾರೆ ಅನ್ನೋ ಆರೋಪ ಇತ್ತು. ಆ ವಿವಾದಿತ ಜಾಗದಲ್ಲಿ ಹಾಲೂ ಉತ್ಪಾದಕರ ಸಂಘದ ಶೆಡನ್ನು ಕಿತ್ತೆಸೆಯಲು ಒಂದು ಸುಮುದಾಯು ಮುಂದಾಗುತ್ತದೆ. ಇನ್ನು ಮತ್ತೊಂದು ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತದೆ. ಈ ವೇಳೆ ಎರಡು ಸುಮುದಾಯದ ನಡುವೆ ಹೊಡೆದಾಟ ನಡೆದಿದೆ. ಇನ್ನು ಗ್ರಾಮಗಳ ಭದ್ರತೆಗೋಸ್ಕರ ಪೋಲೀಸರನ್ನು ನಿಯೋಜನೆ ಮಾಡಲಾಗಿದೆ. ಅದರೂ ಪೋಲೀಸರ ಮುಂದೆಯೇ ಹೊಡೆದಾಡಿದ್ದಾರೆ. ಇನ್ನು ಈ ಪ್ರಕರಣ ಅರಕಲಗೂಡು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.