CRICKET : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಪೂರನ್‌ಗೆ ಮುಂಬೈ ತಂಡದ ನಾಯಕತ್ವ

CRICKET NEWS : ವೆಸ್ಟ್ ಇಂಡೀಸ್‌ ಸ್ಫೋಟಕ ದಾಂಡಿಗ ನಿಕೋಲಸ್ ಪೂರನ್ (Nicholas Pooran) ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಆದರೆ, ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಕೆಲವೇ ಗಂಟೆಗಳ ನಂತರ ಅವರಿಗೆ ನಾಯಕನ ಪಟ್ಟ ಸಿಕ್ಕಿದೆ. ಪೂರನ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರು ಟಿ20 ಕ್ರಿಕೆಟ್ನಲ್ಲಿ ಅವರ ಜನಪ್ರಿಯತೆ ಕೊಂಚವೂ ಕಡಿಮೆಯಾಗಿಲ್ಲ. ಈ ಹೊಡಿಬಡಿ ಆಟಕ್ಕೆ ಸೂಕ್ತವಾದ ಆಟಗಾರನಾಗಿ ಪೂರನ್ ಬೇರೆ ಬೇರೆ ದೇಶಗಳ ಟಿ20 ಲೀಗ್ಗಳಲ್ಲಿ ಸಕ್ರಿಯರಾಗಿದ್ದಾರೆ.

IPL ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿರುವ ಪೂರನ್, ಅಮೆರಿಕದನಲ್ಲಿ ನಡೆಯಲ್ಲಿರುವ ಮೂರನೇ ಆವೃತ್ತಿಯ MLC ಅಂದರೆ ಮೇಜರ್ ಲೀಗ್ ಕ್ರಿಕೆಟ್ನಲ್ಲಿ (Major League Cricket) ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ (MI New York) ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಕಳೆದೆರಡು ಸೀಸನ್ಗಳಲ್ಲಿ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡದ ಪರವಾಗಿ ಆಡುತ್ತಿರುವ ಪೂರನ್ಗೆ ಇದೇ ಮೊದಲ ಬಾರಿಗೆ MI ನ್ಯೂಯಾರ್ಕ್ ತಂಡದ ನಾಯಕತ್ವ ನೀಡಲಾಗಿದೆ. ಈ ಮೊದಲು ತಂಡವನ್ನು ಮುನ್ನಡೆಸಿದ್ದ ಕೀರನ್ ಪೊಲಾರ್ಡ್ ಬದಲಿಗೆ MI ನ್ಯೂಯಾರ್ಕ್ ತಂಡದ ಹೊಸ ನಾಯಕ ನನ್ನಾಗಿ ಪೂರನ್ ಅವರನ್ನು ಆಯ್ಕೆಮಾಡಲಾಗಿದೆ.

 

 

Author:

...
Keerthana J

Copy Editor

prajashakthi tv

share
No Reviews