Pooja Hegde : ಕಾಂಚೀವರಂ ಸೀರೇಲಿ ಪೂಜಾ ಹೆಗ್ಡೆ ಫುಲ್ ಮಿಂಚಿಂಗ್

Pooja Hegde :

ತನ್ನ ಗ್ಲಾಮರ್‌ ಹಾಗೂ ನಟನೆಯಿಂದಲೇ ಪೂಜಾ ಹೆಗ್ಡೆ ಇಡೀ ಭಾರತೀಯ ಚಿತ್ರರಂಗದಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಿದ್ದಾರೆ. ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಕಾಣಿಸಿಕೊಳ್ಳೊ ಮೂಲಕ ಅಭಿಮಾನಿ ನೆಚ್ಚಿನ ನಟಿ ಕೂಡ ಆಗಿದ್ದಾರೆ. ಪ್ರತಿನಿತ್ಯ ತಮ್ಮ ಸೋಶಿಯಲ್ ಮಿಡೀಯಾ ಖಾತೆಯಲ್ಲಿ ಆಕ್ಟೀವ್‌ ಆಗಿರುವ ನಟಿ ಒಂದಿಲ್ಲೊಂದು ಪೋಟೋ ಶೂಟ್‌ನಲ್ಲಿ ನ್ಯೂ ಲುಕ್‌ ನಲ್ಲೇ ಮಿಂಚು ಹರಿಸುತ್ತಾರೆ.

ಕರಾವಳಿ ಬೆಡಗಿ ಪೂಜಾ ಹೆಗ್ಡೆ ಸ್ಟಾರ್ ನಟರ ಜೊತೆ ನಟಿಸೋ ಮೂಲಕ ಸೌತ್‌ ಅಂಡ್‌ ನಾರ್ಥ್‌ ಇಂಡಸ್ಟ್ರಿಯಲ್ಲಿ ಬ್ಯೂಸಿಯಾಗಿದ್ದಾರೆ. ತಮ್ಮ ಹಾಟ್‌ ಲುಕ್‌ನಿಂದಲೇ ಪಡ್ಡೆಗಳ ಹೃದಯದ ರಾಣಿಯಾಗಿದ್ದಾರೆ. ಹಲವಾರು ಹಿಟ್‌ ಚಿತ್ರಗಳ ಮೂಲಕ ಚಿತ್ರ ರಸಿಕರ ಮನಗೆದ್ದಿದ್ದಾರೆ. ಇತ್ತೀಚೆಗೆ ಎಕ್ಸ್‌ ಖಾತೆಯಲ್ಲಿ ಅವರ ಅಜ್ಜಿಯ ಸೀರೆಯನ್ನುಟ್ಟು ಫುಲ್‌ ಮಿಂಚಿದ್ದಾರೆ. ಇದರ ಪೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅಜ್ಜಿ 70 ವರ್ಷಗಳ ಹಿಂದೆ ಧರಿಸಿದ್ದ ಕಾಂಚೀವರಂ ಸೀರೆಯನ್ನು ಹುಟ್ಟು ಪೋಟೋಗಳಿಗೆ ಪೋಸ್‌ ಕೋಡೊ ಮೂಲಕ ತಮ್ಮ ಹಿರಿಯರನ್ನ ನೆನಪಿಸಿಕೊಂಡಿದ್ದಾರೆ. 

ಸಾಂಪ್ರಾದಾಯಿಕ ಉಡುಗೆಯಲ್ಲಿ ಮಿಂಚಿ ಹರಿಸಿರೋ ಚೆಲುವೆ ಹರಿರು ಕಾಂಜೀವರಂ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಇನ್ನು ಸೀರೆಗೆ ತಕ್ಕಂತೆ ಮ್ಯಾಕಿಂಗ್‌ ಬಳಿ, ಮಲ್ಲಿಗೆ ಧರಿಸಿ ಫುಲ್‌ ಖುಷಿಯಾಗಿ  ಪೋಸ್‌ ನೀಡಿದ್ದು, 70 ವರ್ಷದ ಹಳೆಯ ಸೀರೆ, ನನ್ನ ಅಜ್ಜಿ ಧರಿಸಿದ್ದು, ಹಸಿರು ಕಾಂಜೀವರಂ ಸೀರೆ ಅಜ್ಜಿಯ ನೆನಪನ್ನ ಕಣ್‌ಮುಂದೆ ತಂದಿದೆ ಎಂದು ಬರೆದುಕೊಂಡಿದ್ದಾರೆ. ಮದುವೆಗೆ ಹೋಗಲು ರೆಡಿ ಆಗುವಾಗ ಮನೆಯಲ್ಲಿ ಮಲ್ಲಿಗೆಯ ತಾಜಾ ಪರಿಮಳ ಮತ್ತು ಮೊದಲ ಮಳೆಯ ನಂತರ ಒದ್ದೆಯಾದ ಮಂಗಳೂರಿನ ಮಣ್ಣಿನ ಸುವಾಸನೆ. ವಾವ್‌ , ಸರಳವಾದ ವಸ್ತುಗಳಲ್ಲಿ ಸೌಂದರ್ಯ" ಎಂದು ಬಣ್ಣಿಸಿದ್ದಾರೆ

Author:

...
Sushmitha N

Copy Editor

prajashakthi tv

share
No Reviews