KUNIGAL NEWS : ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನಲ್ಲಿ ದುಃಖದ ಘಟನೆ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಅಪರಿಚಿತ ವಾಹನ ಡಿಕ್ಕಿಯಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ಈ ಘಟನೆ ನೆನ್ನೆ ಸಂಜೆ ಕುಣಿಗಲ್ ಪಟ್ಟಣದ ಉರ್ಕೆಹಳ್ಳಿ ಸಮೀಪದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಅಲ್ಲಿನ ವಾಹನ ಜಾಮ್ ನಿವಾರಣೆಗೆ ತೆರಳಿದ್ದ ನಂತರ, ವಾಪಸ್ ಹಿಂದಿರುಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪೋಲೀಸ್ ಇಬ್ಬಂದಿ ನಿಂಗರಾಜು (46) ಎಂಬವರು ಸಾವನ್ನಪ್ಪಿದ್ದಾರೆ. ಅವರು ಕುಣಿಗಲ್ ಪೊಲೀಸ್ ಠಾಣೆಯ 112 ಎಮರ್ಜೆನ್ಸಿ ವಾಹನದ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಈ ಘಟನೆಯ ನಂತರ ನಿಂಗರಾಜು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯ ಲಾಯಿತು. ಘಟನೆ ಬಗ್ಗೆ ಕೇಳಿ ನಿಂಗರಾಜು ಕುಟುಂಬದವರು ಹಾಗೂ ಸಹೋದ್ಯೋಗಿಗಳಿಗೆ ಸಂತಾಪ ಸೂಚಿಸಿದ್ದಾರೆ.