ತುಮಕೂರು: ಮಾದಕ ಮಾತ್ರೆಗಳನ್ನ ಮಾರಾಟ ಮಾಡುತ್ತಿದ್ದವರ ಹೆಡೆಮುರಿ ಕಟ್ಟಿದ ಪೊಲೀಸರು ...!

ಮಾದಕ ಮಾತ್ರೆಗಳನ್ನ ಮಾರಾಟ ಮಾಡುತ್ತಿದ್ದ ಬಂಧಿತ ಆರೋಪಿಗಳು
ಮಾದಕ ಮಾತ್ರೆಗಳನ್ನ ಮಾರಾಟ ಮಾಡುತ್ತಿದ್ದ ಬಂಧಿತ ಆರೋಪಿಗಳು
ತುಮಕೂರು

ತುಮಕೂರು:

ಕಲ್ಪತರು ನಾಡು ತುಮಕೂರು ಶೈಕ್ಷಣಿಕ ನಗರಿ ಅಂತಲೇ ಪ್ರಸಿದ್ಧಿ ಪಡೆದಿರೋ ನಗರ. ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಗಳು ನಡೆದಾಡಿದ್ದ ಬೀಡು. ವಿದ್ಯಾವಂತರು, ಪ್ರಜ್ಞಾವಂತರೇ ಹೆಚ್ಚಿರೋ ತುಮಕೂರು ನಗರ ಯಾವಾಗಲೂ ಶಾಂತಿಗೆ ಹೆಸರಾಗಿದ್ದ ಊರು. ಆದರೆ ಇತ್ತೀಚೆಗೆ ತುಮಕೂರು ನಗರ ನಶಾಚರಿಗಳ ಅಡ್ಡವಾಗಿ ಬದಲಾಗ್ತಿದೆ. ಗಾಂಜಾ, ಡ್ರಗ್ಸ್ನಂತಹ ನಿಷೇಧಿತ ವಸ್ತುಗಳು ನಗರದಲ್ಲಿ ಎಗ್ಗಿಲ್ಲದೇ ಮಾರಾಟವಾಗ್ತಿದೆ ಅಂತಾ ಸಾರ್ವಜನಿಕರೇ ಆರೋಪ ಮಾಡ್ತಾ ಇದ್ದರು. ಬಗ್ಗೆ ನಿಮ್ಮ ಪ್ರಜಾಶಕ್ತಿಯೂ ಸಾಲುಸಾಲು ವರದಿಗಳನ್ನು ಬಿತ್ತರಿಸುತ್ತಲೇ ಬರ್ತಿದೆ. ಇದೀಗ ತುಮಕೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಮಾದಕ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಹೌದು ಹೊಸಬಡಾವಣೆ ಪೊಲೀಸ್ಠಾಣಾ ವ್ಯಾಪ್ತಿಯ ಎಸ್..ಟಿ ಬಡಾವಣೆರೈಲ್ವೆ ಹಳಿಗಳ ಪಕ್ಕ ಹಾಗೂ ಉಪ್ಪಾರಹಳ್ಳಿ ಬ್ರಿಡ್ಜ್‌, ಶ್ರೀದೇವಿ ಕಾಲೇಜುಗಳ ಬಳಿ ಕೆಲ ಹುಡುಗರು ಮೆಡಿಕಲ್ ಶಾಪ್ ಗಳಿಗೆ ಹೋಗಿ ಮಾದಕ ಟೈಡಾಲ್ ಮಾತ್ರೆಗಳನ್ನು ಕೊಡುವಂತೆ ಕೇಳ್ತಾ ಇದ್ರು. ಇದರಿಂದ ಪ್ರೇರಿಪಿತರಾದ ತುಮಕೂರು ನಗರದ ಮಧುಗಿರಿ ರಸ್ತೆಯಲ್ಲಿರುವ ಮೆಡ್ ಪ್ಲಸ್ ಮೆಡಿಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಭಾನು ಪ್ರಕಾಶ್ ಎಂಬುವವನು ಮೆಡಿಕಲ್ ಗಳಿಗೆ ಬರುವ ಮೆಡಿಕಲ್ರೆಫ್ಗಳಿಗೆ ನಿಷೇಧಿತ ಟೈಡಾಲ್ ಮಾತ್ರೆಗಳನ್ನು ತಂದುಕೊಡುವಂತೆ ತಿಳಿಸಿದ್ದ. ಆಗ ಮೆಡಿಕಲ್ರೆಫ್‌  ರಾಘವೇಂದ್ರ ಎಂಬಾತ ಮಾತ್ರೆಗಳನ್ನು ಯಾವುದೇ ಬಿಲ್ ಇಲ್ಲದೇ ಅಕ್ರಮವಾಗಿ ತಂದುಕೊಟ್ಟಿದ್ದ. ಮೊದಲು ಮೆಡಿಕಲ್ಅಂಗಡಿಗಳಲ್ಲೆ ಮಾರಾಟ ಮಾಡಿದ್ದ ಐನಾತಿಗಳು ನಂತರ ತಮ್ಮ ಫೋನ್ನಂಬರ್ನೀಡಿ ಶ್ರೀದೇವಿ ಕಾಲೇಜು ಬಳಿ, ಇಂಡಸ್ಟ್ರೀಯಲ್ಏರಿಯಾಗಳಿಗೆ ಕರೆಸಿಕೊಂಡು ೧೦ ಮಾತ್ರೆಗಳಿರುವ ಒಂದು ಶೀಟ್ಅನ್ನು ೮೦೦ ರೂಪಾಯಿಯಂತೆ ಮಾರಾಟ ಮಾಡ್ತಿದ್ದರು.

ನಂತರ ಮಾತ್ರೆಗಳನ್ನು ಅಭಿಷೇಕ್ಎಂಬುವವರಿಂದ ಮಾರಾಟ ಮಾಡಿಸುತ್ತಿದ್ರು. ಭಾನುಪ್ರಕಾಶ್ತರಿಸಿಕೊಡ್ತಿದ್ದ ಮಾತ್ರೆಗಳನ್ನು  ಅಭಿಷೇಕ್ತನಗೆ ಫೋನ್ಮಾಡ್ತಿದ್ದ ಮೊಹಮ್ಮದ್ ಸೈಪ್, ಸೈಯದ್ ಲುಕ್ಮಾನ್, ಅಫ್ತಬ್, ಗುರುರಾಜ್ ಹೆಚ್ ಎಸ್ ಎಂಬುವವರಿಗೆ ಮಾರಾಟ ಮಾಡ್ತಿದ್ದ. ಇವರೆಲ್ಲಾ ಒಂದು ಮಾತ್ರೆಯನ್ನ ನೂರರಿಂದ ಇನ್ನೂರು ರೂಪಾಯಿವರೆಗೆ ಮಾರಾಟ ಮಾಡಿ ಅಕ್ರಮ ಲಾಭಗಳಿಸುತ್ತಿದ್ದರು. ಇವರು ನಗರದ ಎಸ್ ಐಟಿ ಬಡಾವಣೆ, ಉಪ್ಪಾರಹಳ್ಳಿ, ರೈಲ್ವೆ ಹಳಿಗಳ ಪಕ್ಕ, ಶ್ರೀದೇವಿ ಕಾಲೇಜ್ ಹಾಗೂ ನಗರದ ಇನ್ನು ಕೆಲ‌‌ ಮೆಡಿಕಲ್ ಶಾಪ್ಗಳಿಗೆ ಮಾದಕ ವಸ್ತುಗಳ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದರು. ಬಗ್ಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ತುಮಕೂರು ಹೊಸ ಬಡಾವಣೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದು, ಲಕ್ಷಾಂತರ ಮೌಲ್ಯದ ೩೦೦ ಮಾದಕ ಟೈಡಾಲ್ಮಾತ್ರೆಗಳು, ಸಿರಂಜ್ಗಳು, ಮೊಬೈಲ್ಹಾಗೂ ಬೈಕ್ಗಳನ್ನ ವಶಕ್ಕೆ ಪಡೆದಿದ್ದಾರೆ.

ಶಿರಾ ಮೂಲದ ಭಾನುಪ್ರಕಾಶ್‌, ಚಿಕ್ಕಪೇಟೆ ನಿವಾಸಿ ರಾಘವೇಂದ್ರ, ಮಧುಗಿರಿ ಮೂಲದ ಅಭಿಷೇಕ್‌, ಕ್ಯಾತ್ಸಂದ್ರ ಸಂತೇಬೀದಿಯ ನಿವಾಸಿಗಳಾದ ಮೊಹಮದ್ಸೈಫ್‌, ಸೈಯದ್ ಲುಕ್ಮಾನ್, ಅಫ್ತಬ್ , ಕೆಸರುಮಡು ನಿವಾಸಿ ಗುರುರಾಜ್ಅವರನ್ನು ಪೊಲೀಸರು ಬಂಧಿಸಲಾಗಿದೆ. ಬಂಧಿತರಿಂದ 10,500 ಬೆಲೆಬಾಳುವ 300 ಮಾತ್ರೆಗಳು, ಸೀರಂಜ್ ಗಳು ಹಾಗೂ 7 ಮೊಬೈಲ್ ಹಾಗೂ 2 ಬೈಕ್ ಗಳನ್ನು ಹೊಸಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Author:

share
No Reviews