ಚಿಕ್ಕನಾಯಕನಹಳ್ಳಿ :ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶಿಕ್ಷೆಯ ತೀರ್ಪು ಪ್ರಕಟ ಕೂಡ ಅಷ್ಟೆ ವೇಗವಾಗಿ ನಡೆತಾ ಇದೆ. ಮೊನ್ನೆ ತಾನೇ ತುಮಕೂರು ನ್ಯಾಯಾಲಯದಲ್ಲಿ ವ್ಯಕ್ತಿಯೋರ್ವನ ಮೇಲೆ ಪೋಕ್ಸೋ ಪ್ರಕರಣ ಸಾಬೀತಾದ ಹಿನ್ನಲೆ ಬರೋಬ್ಬರಿ 40 ವರ್ಷ ಜೈಲು ಶಿಕ್ಷೆ ಪ್ರಕಟವಾಗಿತ್ತು. ಇದರ ಬೆನ್ನಲ್ಲೆ ಇದೀಗ ಚಿಕ್ಕನಾಯಕನಹಳ್ಳಿಯಲ್ಲಿರುವ ಪೋಕ್ಸೋ ಪ್ರಕಣವೊಂದು ಬೆಳಕಿದೆ ಬಂದಿದೆ. ಆರೋಪ ಸಾಭೀತಾದ ಹಿನ್ನಲೆ ವ್ಯಕ್ತಿಗೆ 20 ವರ್ಷ ಜೈಲು ಮತ್ತು ಎರಡುವರೆ ಲಕ್ಷ ದಂಡಾ ಕೋರ್ಟ್ ವಿಧಿಸಿದೆ.
ಹೌದು, ಚಿಕ್ಕನಾಯಕನಹಳ್ಳಿ ಪೋಕ್ಸೋ ಪ್ರಕರಣದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿ ದರ್ಶನ್ 20 ವರ್ಷಗಳ ಜೈಲು ಶಿಕ್ಷೆ ಹಾಗೂ ₹2,50,000 ದಂಡ ವಿಧಿಸಿ ತುಮಕೂರು ಜಿಲ್ಲಾ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. 2022ರಲ್ಲಿ ಚಿಕ್ಕನಾಯಕನಹಳ್ಳಿ ವೃತ್ತ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆಯ ಪ್ರಕರಣವನ್ನು ಎಸ್.ಸಿ. ನಂ. 162/2022 ಅಡಿ ಐಪಿಸಿ ಸೆಕ್ಷನ್‌ಗಳು 376, 506, 500, 34, 22 ಜೊತೆಗೆ ಪೋಕ್ಸೋ ಕಾಯ್ದೆ 2012ರ ಸೆಕ್ಷನ್‌ಗಳು 04 ಮತ್ತು 06 ಅಡಿಯಲ್ಲಿ ದಾಖಲಸಿ ತೀರ್ಪು ಪ್ರಕಟಗೊಂಡಿದೆ.
ಇನ್ನು ಘಟನೆಗೆ ಸಂಬಂಧ ಅಂದಿನ ಚಿಕ್ಕನಾಯಕನಹಳ್ಳಿ ವೃತ್ತದ ಪೊಲೀಸ್ ಪಿಎಸ್ಐ ನಿರ್ಮಲಾ ವಿ. ಅವರು ಈ ಪ್ರಕರಣದ ತನಿಖೆ ನಡೆಸಿ ಇಬ್ಬರನ್ನೂ ಬಂಧಿಸಿ ದೋಷಾರೋಪಣ ಪಟ್ಟಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರಂತೆ ಮೇ. 22 ರಂದು ಈ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳಲ್ಲಿ ದರ್ಶನ್ ಮೇಲೆ ಆರೋಪ ಸಾಬೀತಾದ ಹಿನ್ನಲೆ ಕೋರ್ಟ್ ತೀರ್ಪನ್ನು ಪ್ರಕಟಿಸಿದೆ. ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್ ಅವರು ವಾದ ಮಂಡಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.