PM MODI : US ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿ ತುಳಸಿ ಗಬ್ಬಾರ್ಡ್‌ ಆಯ್ಕೆ| ಮೋದಿ ಅಭಿನಂದನೆ

ಪ್ರಧಾನಿ ನರೇದ್ರ ಮೋದಿ ಮತ್ತು ಯುಎಸ್‌ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್‌
ಪ್ರಧಾನಿ ನರೇದ್ರ ಮೋದಿ ಮತ್ತು ಯುಎಸ್‌ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್‌
ಅಂತರರಾಷ್ಟ್ರೀಯ

ವಾಷಿಗ್ಟಂನ್‌ :

ಪ್ರಧಾನಿ ನರೇಂದ್ರ ಮೋದಿ  ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ. ಗುರುವಾರ ಬೆಳಗ್ಗೆ ವಾಷಿಂಗ್ಟನ್‌ ಡಿಸಿಗೆ ಬಂದಿಳಿದ ಅವರು ಹೊಸದಾಗಿ ಆಯ್ಕೆಯಾದ ಯುಎಸ್‌ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್‌ ಅವರನ್ನು ಭೇಟಿಯಾಗಿದ್ದಾರೆ. ತುಳಸಿ ಗಬ್ಬಾರ್ಡ್ ಅವರೊಂದಿಗಿನ ಭೇಟಿಯ ಫೋಟೊವನ್ನು ಹಂಚಿಕೊಂಡ ಪ್ರಧಾನಿ ಮೋದಿ, ತುಳಸಿ ಅವರೊಂದಿಗೆ ಭಾರತ-ಯುಎಸ್ ಸ್ನೇಹದ ಬಗ್ಗೆ ಚರ್ಚಿಸಿದೆ. ಟ್ರಂಪ್ ಅವರ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿ ನೇಮಕ ಗೊಂಡಿದ್ದಕ್ಕಾಗಿ ಅವರನ್ನು ಅಭಿನಂದಿಸಿದ್ದೇನೆ ಎಂದು ತಿಳಿಸಿದ್ದಾರೆ.

ಎರಡು ದಿನಗಳ ಫ್ರಾನ್ಸ್​ ಪ್ರವಾಸ ಅಂತ್ಯಗೊಳಿಸಿದ ಮೋದಿ ಅಮೆರಿಕಗೆ ಭೇಟಿ ನೀಡಿದ್ದಾರೆ. ಅಮೇರಿಕ ಅಧ್ಯಕ್ಷ ಡೊನಾಡ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಎರಡು ದಿನಗಳ ಭೇಟಿಗಾಗಿ ಅಮೇರಿಕಕ್ಕೆ ಬಂದಿಳಿದಿದ್ದಾರೆ. ಅಮೇರಿಕಕ್ಕೆ ಬಂದಿಳಿದ ಬಳಿಕ ಮೋದಿ ಬ್ಲೇರ್‌ ಹೌಸ್ಗೆ ಭೇಟಿ ನೀಡಿದ್ದರು. ಇದೇ ವೇಳೆ ಭಾರತೀಯ ಸಮುದಾಯದವರು ಮೋದಿ ಅವರನ್ನು ಸ್ವಾಗತಿಸಿದರು. ಭಾರತ್‌ ಮಾತಾ ಕಿ ಜೈ ಮೋದಿ ಮೋದಿ ಎಂದು ಘೋಷಣೆ ಕೂಗಿದ್ದರು.

ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಮೋದಿ ಅವರನ್ನು ಭಾರತೀಯ ಅನಿವಾಸಿಗಳ ಬೃಹತ್ ಜನಸಮೂಹ ಸ್ವಾಗತಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿತು. ಚಳಿಗಾಲದ ಚಳಿಯಲ್ಲಿ ಬೆಚ್ಚಗಿನ ಸ್ವಾಗತ! ಶೀತ ಹವಾಮಾನದ ಹೊರತಾಗಿಯೂ, ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ವಲಸಿಗರು ನನ್ನನ್ನು ವಿಶೇಷ ಸ್ವಾಗತದೊಂದಿಗೆ ಬರಮಾಡಿಕೊಂಡಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು ಎಂದು ಮೋದಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Author:

...
Editor

ManyaSoft Admin

Ads in Post
share
No Reviews