ತುಮಕೂರು : ತುಮಕೂರಿಗರೇ ಹುಷಾರ್‌..ಹುಷಾರ್‌.. |ಡೇಂಜರ್‌ ಆಗಿವೆ ವಿದ್ಯುತ್‌ ಬಾಕ್ಸ್‌ಗಳು

ತುಮಕೂರು : ತುಮಕೂರನ್ನ ಸ್ಮಾರ್ಟ್‌ ಸಿಟಿ, ಅಭಿವೃದ್ಧಿ ಹೊಂದುತ್ತಿರುವ ನಗರ, 2 ನೇ ಬೆಂಗಳೂರು ಅಂತಾನು ಕರೆಯಲಾಗುತ್ತೆ. ಆದ್ರೆ ತುಮಕೂರು ನಗರಾದ್ಯಂತ ಸಮಸ್ಯೆಗಳ ಆಗರವೇ ಅಡಗಿದೆ. ಇದರ ನಡುವೆ ಕೆಇಬಿ ಮತ್ತು ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಪಾರವೇ ಇಲ್ಲ. ಈಗಾಗಲೇ ಇತ್ತೀಚೆಗೆ ಸುರಿದ ಮಳೆಯಿಂದಾಗಿ ವಿದ್ಯುತ್‌ ತಂತಿ ಸ್ಪರ್ಷಿಸಿ ಹಲವರು ಸಾವನ್ನಪ್ಪಿದ್ದಾರೆ. ಆದ್ರೂ ಕೂಡ ಬೆಸ್ಕಾಂ ಆಗಲಿ, ಕೆಇಬಿ ಅಧಿಕಾರಿಗಳಾಗಲಿ ಮುಂಜಾಗ್ರತಾ ಕ್ರಮಕೈಗೊಳ್ಳುವಲ್ಲಿ ವಿಫಲರಾಗ್ತಿದ್ದಾರೆ. ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯಕೆ ಈಗ ಮತ್ತೊಂದು ಸ್ಥಳ ಸಾವಿಗೆ ಬಾಯ್ತೆರೆದು ಕೂತಿದೆ. ಅದೊಂದು ಸ್ಥಳದಲ್ಲಿ ಮಾತ್ರವಲ್ಲ ಆ ಸಮಸ್ಯೆ ಇರೋದು ಇಡೀ ನಗರದಾದ್ಯಂತ.

ಉಪ್ಪಾರಹಳ್ಳಿಗೆ ಹೋಗುವ ಬ್ರಿಡ್ಜ್‌ ಕೆಳಭಾಗದಲ್ಲಿರುವ ವಿದ್ಯುತ್‌ ಬಾಕ್ಸ್‌ ಓಪನ್‌ ಆಗಿದ್ದು ಕೆಇಬಿ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಭದ್ರಮ್ಮ ಚೌಟ್ರಿ-ರಾಧಾಕೃಷ್ಣ ರಸ್ತೆಯಲ್ಲಿರುವ ಬ್ರಿಡ್ಜ್‌ ಉಪ್ಪಾರಹಳ್ಳಿಗೆ ಸಂಪರ್ಕ ಕಲ್ಪಿಸುತ್ತೆ. ಇದರ ಕೆಳಭಾಗದಲ್ಲಿ ವಿದ್ಯುತ್‌ ಬಾಕ್ಸ್‌ ಓಪನ್‌ ಆಗಿದ್ದು, ಸಾವಿಗೆ ಬಾಯ್ತೆರೆದು ಕೂತಿದೆ. ಬ್ರಿಡ್ಜ್‌ ಕೆಳಭಾಗದಲ್ಲಿ ಪುಡ್‌ ಸ್ಟ್ರೀಟ್‌ ಮಾಡಲಾಗಿದೆ. ಪ್ರತಿನಿತ್ಯ ಸಾರ್ಜನಿಕರು ಟೀ, ಕಾಫೀ ಕುಡಿಯಲು, ತಿಂಡಿ, ಊಟ ಮಾಡಲು ಇಲ್ಲಿಗೆ ಬರ್ತಾನೇ ಇರ್ತಾರೆ. ಇಂತಹ ಸ್ಥಳದಲ್ಲಿ ಇಂತಹ ಓಪನ್‌ ವಿದ್ಯುತ್‌ ಬಾಕ್ಸ್‌ ಇರೋದ್ರಿಂದ ಸಾರ್ವಜನಿಕರಿಗೆ ಅಪಾಯ ಕಟ್ಟಿಟ್ಟಬುತ್ತಿಯಾಗಿದೆ. ಇಲ್ಲಿ ಇಟ್ಟಿರುವಂತಹ ವಿದ್ಯುತ್‌ ಬಾಕ್ಸ್‌ ಸಾಮಾನ್ಯ ವಿದ್ಯುತ್‌ ಪವರ್‌ಗಿಂತ ಸ್ವಲ್ಪ ಜಾಸ್ತಿಯೇ ಇರುತ್ತೆ. ಒಂದು ಕಡೆ ಆ ವಿದ್ಯುತ್‌ ಬಾಕ್ಸ್‌ ಗಳು ತುಕ್ಕು ಹಿಡಿದು ಕೂತಿದ್ರೆ ಮತ್ತೊಂದು ಕಡೆ ವೈರ್‌ಗಳಿಗೆ ಟೇಪ್‌ ಸುತ್ತಿ ಕಾಟಾಚಾರದ ಕೆಲಸ ಮಾಡಿದ್ದಾರೆ. ಇಲ್ಲಿ ಓಡಾಡುವ ಜನರು ಮಿಸ್‌ ಆಗಿ ಮುಟ್ಟಿದ್ರೆ ಅವರ ಪ್ರಾಣಪಕ್ಷಿ ಹಾರಿಹೋಗುತ್ತೆ.

ಇನ್ನು ಇಂತಹ ಸಮಸ್ಯೆ ಇದೊಂದು ಕಡೆ ಮಾತ್ರ ಅಲ್ಲ ನಗರದ ಬಹುತೇಕ ಭಾಗಗಳಲ್ಲಿ ಕಂಡು ಬರುತ್ತದೆ. ನಗರದ ಡಿಸಿ ಕಚೇರಿ ,ಬಿಎಚ್ ರಸ್ತೆ, ಅಶೋಕ ರಸ್ತೆ, ಗುಬ್ಬಿಗೇಟ್ ರಸ್ತೆ,  ಹೀಗೆ ಎಲ್ಲಾ ಕಡೆಯೂ ಈ ರೀತಿಯಾಗಿ ವಿದ್ಯುತ್‌ ಬಾಕ್ಸ್‌ ಗಳು ಓಪನ್‌ ಆಗಿವೆ. ಜನನಿಬಿಡ ಪ್ರದೇಶದಲ್ಲಿಯೇ ಈ ರೀತಿಯಾಗಿ ಅವ್ಯವಸ್ಥೆಯಾದ್ರೆ. ಇನ್ನು ವಾರ್ಡ್‌ ಒಳಗಡೆ ಇರುವ ಇಂತಹದ್ದೆ ಸಮಸ್ಯೆಗಳನ್ನ ಕೇಳೋರೇ ಇಲ್ಲದಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ವಿದ್ಯುತ್‌ ಬಾಕ್ಸ್‌ನ್ನು ಮುಚ್ಚುವ ಕೆಲಸ ಮಾಡಬೇಕಿದೆ.

Author:

...
Keerthana J

Copy Editor

prajashakthi tv

share
No Reviews