ಶಿರಾ : ಶಿರಾ ತಾಲೂಕಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ

ಡಿವೈಎಸ್ಪಿ ನೇತೃತ್ವದಲ್ಲಿ ಶಾಂತಿ ಸಭೆಯನ್ನು ನಡೆಸಲಾಯಿತು.
ಡಿವೈಎಸ್ಪಿ ನೇತೃತ್ವದಲ್ಲಿ ಶಾಂತಿ ಸಭೆಯನ್ನು ನಡೆಸಲಾಯಿತು.
ತುಮಕೂರು

ಶಿರಾ :

ಶಿರಾ ನಗರದ ಉಪವಿಭಾಗ ಪೊಲೀಸ್‌ ಠಾಣಾ ಆವರಣದಲ್ಲಿ ಯುಗಾದಿ ಮತ್ತು ರಂಜಾನ್‌ ಹಬ್ಬದ ಅಂಗವಾಗಿ ಶಾಂತಿ ಸಭೆಯನ್ನು ನಡೆಸಲಾಯಿತು. ಶಿರಾ ಡಿವೈಎಸ್‌ಪಿ ಬಿ.ಕೆ ಶೇಖರ್ ನೇತೃತ್ವದಲ್ಲಿ ಶಾಂತಿ ಸಭೆಯನ್ನು ನಡೆಸಲಾಯ್ತು. ಶಿರಾ ಡಿವೈಎಸ್ಪಿ ಶೇಖರ್‌ ಅವರು ಧಾರ್ಮಿಕ ಮುಖಂಡರುಗಳ ಜೊತೆ ಶಾಂತಿ ಸಭೆ ನಡೆಸಿ ಸರ್ಕಾರದ ಮಾರ್ಗಸೂಚಿ ಅನ್ವಯ ಹಬ್ಬಗಳನ್ನು ಆಚರಿಸುವಂತೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದರು. ಅಲ್ಲದೇ ಯುಗಾದಿ ರಂಜಾನ್‌ ಹಬ್ಬಗಳು ಒಟ್ಟಿಗೆ ಬಂದಿದ್ದು, ಮುಸ್ಲಿಂ ಹಿಂದೂಗಳು ಸೌಹಾರ್ದದಿಂದ ಹಬ್ಬ ಆಚರಿಸಿ ಎಂದು ತಿಳಿಸಿದರು.

ಶಿರಾ ನಗರ ಪೊಲೀಸ್‌ ಠಾಣೆಯಲ್ಲಿ ಮಂಜೇಗೌಡ ಮಾರ್ಗದರ್ಶನದಲ್ಲಿ ಸಭೆ ನಡೆದರೆ, ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್‌ ಠಾಣಾ ಆವರಣದಲ್ಲಿ ಪಿಎಸ್‌ ಐ ಭವಿತಾ ಹಾಗೂ ಪಿಎಸ್‌ ಐ ಸುಹೇಲ್‌ ಕುಮಾರ್‌ ನೇತೃತ್ವದಲ್ಲಿ ಹಬ್ಬದ ಹಿನ್ನಲೆ ಶಾಂತಿ ಸಭೆಗಳನ್ನು ನಡೆಸಲಾಯಿತು. ಈ ವೇಳೆ ಪಿಎಸ್‌ ಐ ಭವಿತ ಅವರು ಹಿಂದೂಗಳಿಗೆ ಯುಗಾದಿ ಮತ್ತು ಮುಸ್ಲಿಂ ಸಮುದಾಯದವರಿಗೆ ರಂಜಾನ್ ಪವಿತ್ರ ಹಬ್ಬಗಳಾಗಿದ್ದು. ಈ ಎರಡೂ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಬೇಕು ಎಂದರು. ಪಟ್ಟನಾಯಕನಹಳ್ಳಿಯಲ್ಲಿ ಹಿಂದೂ ಮುಸ್ಲಿಮರು ಭಾವೈಕ್ಯತೆ ಕಾಪಾಡಿಕೊಂಡು ಬಂದಿದ್ದು, ಕಿಡಿಗೇಡಿಗಳ ವದಂತಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದರು. ಇನ್ನು ಯುಗಾದಿ ಸಂದರ್ಭದಲ್ಲಿ ಜೂಜಾಟದಲ್ಲಿ ಪಾಲ್ಗೊಂಡರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Author:

...
Editor

ManyaSoft Admin

share
No Reviews