ಪಾವಗಡ:
ಪಾವಗಡ ಪಟ್ಟಣದಲ್ಲಿ ನೀರಾವರಿ ಹೋರಾಟ ವೇದಿಕೆ ವತಿಯಿಂದ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಸಭೆಯಲ್ಲಿ ವಿವಿಧ ಸಂಘದ ಸದಸ್ಯರು, ಅಧ್ಯಕ್ಷರುಗಳು ಹಾಗೂ ರೈತ ಸಂಘದ ಅಧ್ಯಕ್ಷರು, ಸದಸ್ಯರುಗಳು, ಮಹಿಳಾ ಘಟಕದ ಸದಸ್ಯರು, ಅಧ್ಯಕ್ಷರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ತುಂಗಭದ್ರ ಹೋರಾಟ ಸಮಿತಿಯ ಸದಸ್ಯ ಶಿವಪ್ರಸಾದ್, ತುಂಗಭದ್ರಾ ಜಲಾಶಯದ ಕುಡಿಯುವ ನೀರಿನ ಯೋಜನೆಯು ಅನುಷ್ಟಾನಗೊಂಡಿದೆ. ಆದರೆ ಈ ಯೋಜನೆ ಅನುಷ್ಠಾನಕ್ಕಾಗಿ ಪಾವಗಡ ತಾಲ್ಲೂಕಿನ ತುಂಗಭದ್ರಾ ಹಿನ್ನಿರು ನೀರಿನ ವಿಚಾರವಾಗಿ ಈ ಭಾಗದಲ್ಲಿ ದುಡಿದಂತಹ ಸಮಗ್ರ ಹೋರಾಟ ಮಾಡಿದಂತವರ ಸ್ಮರಣೆ ಹಾಗೂ ಪ್ರೇರಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಿನ ಕೆಲವೇ ದಿನ ನಿಗದಿ ಪಡಿಸಿ ಕಾರ್ಯಕ್ರಮ ಮಾಡುವುದಾಗಿ ತಿಳಿಸಿದರು.
ತುಂಗಭದ್ರಾ ಹೊರಟ ಸಮಿತಿಯ ಸದಸ್ಯ ಸೊಗಡು ವೆಂಕಟೇಶ್ ಮಾತನಾಡಿ, ನೀರು ಹರಿಸಲು ಹೋರಾಟ ಮಾಡಿದ ಮತ್ತು ಪಾವಗಡದಿಂದ ಬೆಂಗಳೂರು ವರೆಗೆ ಪಾದಯಾತ್ರೆ ಮಾಡಿ ಹೋರಾಟಕ್ಕೆ ಜಯ ತಂದು ಕೊಟ್ಟ ನೀರು ಹೋರಾಟಗಾರರಿಗೆ ಸನ್ಮಾನ ಮಾಡಲು ಬೃಹತ್ ಕಾರ್ಯಕ್ರಮ ಏರ್ಪಡಿಸಲು ಈ ಹಿಂದೆ ಪೂರ್ವಭಾವಿ ಸಭೆ ನಡೆದಿತ್ತು. ಇದೀಗ ಎರಡನೇ ಸಭೆಯನ್ನು ಕರೆಯಲಾಗಿದೆ, ಈ ಸಭೆಗೆ ಸದಸ್ಯರಾದ ತಾವು ಆಪೇಕ್ಷಿತರಾಗಿದ್ದು ತಪ್ಪದೇ ಆಗಮಿಸಿ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದರು.