ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರಿಂದ ಪ್ರವಾಸಿಗರ ಮೇಲೆ ನಡೆದ ದಾಳಿಯ ಬಳಿಕ ತಕ್ಕ ಪಾಠ ಕಲಿಸಲು ಭಾರತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗಿರುವ ವೀಸಾವನ್ನು ರದ್ದುಗೊಳಿಸಿದೆ. ಇನ್ನು ರಾಜ್ಯದಲ್ಲಿ 92 ಜನ ಪಾಕ್ ಪ್ರಜೆಗಳು ಇದಾರೆ ಎನ್ನಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ನಿಮ್ಮ ರಾಜ್ಯಗಳಲ್ಲಿನ ಪಾಕ್ ಪ್ರಜೆಗಳನ್ನು ಹುಡುಕಿ ವಾಪಾಸ್ ಕಳುಹಿಸಬೇಕು ಎಂದು ಆದೇಶಿಸಿತ್ತು. ಇದರ ಬೆನ್ನಲ್ಲೆ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಪ್ರವೃತ್ತರಾಗಿದ್ದು. ಅದರಂತೆ ಮೈಸೂರು, ಉತ್ತರ ಕನ್ನಡ, ತುಮಕೂರು ಮತ್ತು ದಾವಣಗೆರೆ ಮುಂತಾದ ಕಡೆಗಳಲ್ಲಿ ಒಟ್ಟು 92 ಜನ ಪಾಕಿಸ್ತಾನಿ ಪ್ರಜೆಗಳು ವಾಸವಿದ್ದಾರೆ ಎಂದು ಆಯಾ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ತಿಳಿದುಬಂದಿದೆ.
92 ಜನ ಪಾಕಿಸ್ತಾನಿ ಪ್ರಜೆಗಳಲ್ಲಿ 88 ಜನರು ಧೀರ್ಘಾವಧಿ ವೀಸಾ ಹೊಂದಿದ್ದಾರೆ ಎನ್ನಲಾಗಿದೆ. ಇನ್ನು ಉಳಿದ ನಾಲ್ಕು ಜನರನ್ನು ಮಾತ್ರ ಈ ಕೂಡಲೇ ತೆರಳುವಂತೆ ಆದೇಶ ನೀಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಪಾಕ್ ಪ್ರಜೆಗಳು ವಾಸವಿರುವುದು ಎನ್ನಲಾಗಿದೆ. ಇಲ್ಲಿ ಬಂದು ನೆಲೆಸಿರುವವರ ಪೈಕಿ 12 ಮಹಿಳೆಯರು ಮತ್ತು ಮೂವರು ಮಕ್ಕಳು ಎನ್ನಲಾಗಿದೆ. ಇಷ್ಟು ಜನ ಕೂಡ ಕೆಲಸದ ನಿಮಿತ್ತ ಇಲ್ಲಿ ಬಂದು ನೆಲೆಸಿರುವವರು ಎನ್ನಲಾಗಿದೆ.
ಭಾರತಕ್ಕೆ ಯಾವೊಬ್ಬ ವಿದೇಶಿ ಪ್ರಜೆ ಬಂದಾಗಲೂ ಪ್ರಾದೇಶಿ ನೋಂದಣಿ ಕೇಂದ್ರ (FRRO) ದಲ್ಲಿ ಕಡ್ಡಾಯವಾಗಿ ನೊಂದಾಯಿಸಿಬೇಕು. ಈ ಮಾಹಿತಿಯು ಆಯಾ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗಳಲ್ಲಿ ದಾಖಲಾಗಿರುತ್ತದೆ. ಇಂತಹವರು ಕೂಡಲೇ ದೇಶವನ್ನು ಬಿಟ್ಟು ಹೋಗಬೇಕಿದೆ. ಇನ್ನು ಅನಧಿಕೃತ ಮತ್ತು ಅಕ್ರಮವಾಗಿ ನೆಲೆಸಿರುವವರನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿ ಬಂಧನದಲ್ಲಿರಿಸುತ್ತಾರೆ. ನಂತರ ಅದನ್ನು ರಾಜ್ಯ ಗೃಹ ಇಲಾಖೆಯಿಂದ ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ.