ದೊಡ್ಡಬಳ್ಳಾಪುರ: ಕೆರೆಯ ಮಣ್ಣು ವಿವಾದದ ಬಗ್ಗೆ ಪ್ರಜಾಶಕ್ತಿ ವರದಿ | ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು

ಗ್ರಾಮ ಪಂಚಾಯ್ತಿ ಅಧ್ಯಕ್ಷೆ, ಪಿಡಿಒ ಹಾಗೂ ಪೊಲೀಸ್‌ ಇಲಾಖೆಯವರು ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸುತ್ತಿರುವುದು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ, ಪಿಡಿಒ ಹಾಗೂ ಪೊಲೀಸ್‌ ಇಲಾಖೆಯವರು ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸುತ್ತಿರುವುದು.
ತುಮಕೂರು

ದೊಡ್ಡಬಳ್ಳಾಪುರ: 

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೈರಸಂದ್ರ ಪಾಳ್ಯದ ಕೆರೆಯಲ್ಲಿ ರೈತರೆಲ್ಲರೂ ಸೇರಿ ಊಳು ಎತ್ತಿಸಲಾಗುತ್ತಿತ್ತು. ಕೆರೆಯ ಮಣ್ಣನ್ನು ಎತ್ತಿಸುತ್ತಿರೋದಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಪತಿ ಮೂಗು ತೂರಿಸಿ ದೂರನ್ನು ನೀಡಿದ್ದರು. ಇದರಿಂದ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಪತಿಯ ವಿರುದ್ಧ ಆರೋಪ ಮಾಡಿ ಆಕ್ರೋಶ ಹೊರಹಾಕಿದ್ದರು, ಅಧಿಕಾರ ಹೆಂಡ್ತಿದ್ದು ಆದರೆ ದರ್ಬಾರ್‌ ಮಾತ್ರ ಗಂಡನದ್ದು ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಮಾಡಲಾಗಿತ್ತು. ವರದಿ ಬೆನ್ನಲ್ಲೇ ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ, ಪಿಡಿಒ ಹಾಗೂ ಪೊಲೀಸ್‌ ಇಲಾಖೆಯವರು ಭೇಟಿ ನೀಡಿದ್ದಾರೆ.

ಪ್ರಜಾಶಕ್ತಿ ಟಿವಿಯಲ್ಲಿ ವರದಿ ಬಿತ್ತರಿಸಿದ ಬಳಿಕ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಯಾಗಿದ್ದು, ಗ್ರಾಮಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ದೊಡ್ಡ ತುಮಕೂರು ಗ್ರಾಮ ಪಂಚಾಯತಿಯ ಪಿಡಿಒ ಅಧ್ಯಕ್ಷರು ಸೇರಿ ಚುನಾಯಿತ ಪ್ರತಿನಿಧಿ ಪ್ರತಿನಿಧಿಗಳು ಸಭೆ ಸೇರಿದ್ದಾರೆ. ಈ ವೇಳೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ವಾದ ವಿವಾದಗಳು ಆರಂಭವಾಗಿದ್ದು, ವಾಕ್ಸಮರ ಜೋರಾಗುತ್ತಿದ್ದಂತೆ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಅಂದು ನಡೆಯುವ ಗ್ರಾಮ ಪಂಚಾಯ್ತಿ ಸಭೆಯಲ್ಲಿ ಗ್ರಾಮಸ್ಥರ ಆರೋಪದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತೀರ್ಮಾನಿಸಲಾಗಿದೆ. ಈ ಮಧ್ಯೆ  ಗ್ರಾಮ ಪಂಚಾಯಿತಿ ಅಧ್ಯಕ್ಷ ಸರೋಜಮ್ಮ ಅವರು ತಮ್ಮ ಪತಿಯ ಮೇಲೆ ಬಂದಂತಹ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಈ ಎಲ್ಲ ರಾಜಕೀಯ ಬೆಳವಣಿಗೆ ನಡುವೆ ಸೋಮವಾರದ ಸಭೆಯಲ್ಲಿ ಕೆರೆಯ ಮಣ್ಣಿನ ವಿವಾದ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂದು ಕಾದುನೋಡಬೇಕಿದೆ.

Author:

...
Editor

ManyaSoft Admin

Ads in Post
share
No Reviews