ಪಾವಗಡ:
ಪಾವಗಡ ಪುರಸಭೆಯ ೨೦೨೫-೨೬ನೇ ಸಾಲಿನ ಉಳಿತಾಯ ಬಜೆಟ್ ಮಂಡನೆ ಮಾಡಲಾಯ್ತು. ಬರೋಬ್ಬರಿ ೩೧ ಲಕ್ಷ ರೂಪಾಯಿ ಮೌಲ್ಯದ ಬಜೆಟನ್ನ ಪಾವಗಡ ಪುರಸಭಾ ಅಧ್ಯಕ್ಷ ಪಿ.ಎಚ್.ರಾಜೇಶ್ ಮಂಡಿಸಿದ್ರು. ಇದೇ ವೇಳೆ 40 ಲಕ್ಷ ರೂಪಾಯಿ ವೆಚ್ಚದ ನೂತನ ಪುರಸಭಾ ಸಭಾಂಗಣವನ್ನ ಉದ್ಘಾಟಿಸಲಾಯ್ತು. ಈ ವೇಳೆ ಶಾಸಕ ಎಚ್ ವಿ ವೆಂಕಟೇಶ್, ಮಾಜಿ ಸಚಿವ ವೆಂಕಟರಮಣಪ್ಪ, ಪುರಸಭೆ ಉಪಾಧ್ಯಕ್ಷೆ ಗೀತಾ ಹನುಮಂತರಾಯಪ್ಪ, ಮುಖ್ಯಾಧಿಕಾರಿ ಜಾಫರ್ ಷರೀಫ್ ಸೇರಿದಂತೆ ಪುರಸಭಾ ಸದಸ್ಯರು ಹಾಜರಿದ್ದರು.
ಈ ವೇಳೆ ಮಾತನಾಡಿದ ಶಾಸಕ ಹೆಚ್.ವಿ ವೆಂಕಟೇಶ್, ಕಳೆದ ಚುನಾವಣೆಯಲ್ಲಿ ಬೈಪಾಸ್ ರಸ್ತೆ ಅಭಿವೃದ್ದಿ ಮಾಡೇ ಮಾಡ್ತೀವಿ ಅಂತ ಭರವಸೆ ಕೊಟ್ಟಿದ್ವಿ, ಅದಕ್ಕೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೋಳಿ ಅವ್ರು ಟೆಂಡರ್ ಬಿಡುಗಡೆ ಮಾಡಿದ್ದು. 6 ಒಕ್ಕೂಟಗಳ ಅಧ್ಯಕ್ಷರನ್ನು ಮಾನ್ಯ ಮುಖ್ಯಮಂತ್ರಿಗಳು ಸಭೆಯನ್ನು ಕರೆದಿದ್ರು, ಸಭೆಯಲ್ಲಿ ಬೈಪಾಸ್ ರಸ್ತೆಗೆ 150 ಕೋಟಿ ಹಣವನ್ನ ಬಿಡುಗಡೆ ಮಾಡಲು ಕೇಳಿದ್ದೇನೆ ಎಂದರು. ಜೊತೆಗೆ ಎಲ್ಲಾ ಸದಸ್ಯರು ಚೆನ್ನಾಗಿ ಕೆಲ್ಸ ಮಾಡ್ತೀದೀರಿ ಅಂತಾ ಪ್ರಶಂಸೆ ವ್ಯಕ್ತಪಡಿಸಿದರು.
ಬಳಿಕ ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ಮುಂದಿನ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸೋರು ಜನರ ಮಧ್ಯೆ ಕೆಲಸ ಮಾಡುವಂತವರಾಗಬೇಕು. ಜನರ ಸಮಸ್ಯೆಗಳನ್ನ ತಿಳಿದು ಬಗೆಹರಿಸುವಂತ ಉತ್ತಮ ನಾಯಕರಿಗೆ ಮಾತ್ರ ಟಿಕೆಟ್ ನೀಡಲಾಗುವುದು ಎಂದ್ರು, ಮೊದಲು ನಿಮ್ಮ ವಾರ್ಡ್ ಗಳಲ್ಲಿರೋ ಜವಾಬ್ದಾರಿಗಳನ್ನ ಪಾಲಿಸಬೇಕು ಎಂದು ತಿಳಿಸಿದರು.