ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ ಕಿಡಿಕಾರಿದ್ದಾರೆ. ಆಪರೇಷನ್ ಸಿಂಧೂರ ವಿಚಾರದಲ್ಲಿ ಜೆಟ್ ಗಳ ಮಾಹಿತಿ ಕೇಳಿದ್ದ ರಾಹುಲ್ ಗಾಂಧಿ ಇದೀಗ ಮೋದಿ ಅವರನ್ನ ಮೂರು ಪ್ರಶ್ನೆ ಕೇಳುವ ಮೂಲಕ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ರಾಜಸ್ಥಾನದ ಬಿಕಾನೇರ್ ನಲ್ಲಿ ನಡೆದ ಸಾರ್ವಜನಿಕರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ಭಾಷಣದ ವಿಡಿಯೋ ತುಣುಕೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ “ಮೋದಿಜೀ ಅವರೇ ಕ್ಯಾಮರಾ ಮುಂದೆ ಮಾತ್ರ ನಿಮ್ಮ ಕೋಪ ತೋರಿಸುತ್ತೀರ, ಆದರೆ ಇನ್ನುಳಿದಂತೆ ಯಾಕೆ ಮೌನವಾಗಿರುತ್ತೀರ. ಎನ್ನುತ್ತಾ ರಾಹುಲ್ ಗಾಂಧಿ ಮೂರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಮೋದಿ ಜೀ, ಪೊಳ್ಳು ಭಾಷಣ ಮಾಡುವುದು ನಿಲ್ಲಿಸಿ.
ಕೇವಲ ಇದಕ್ಕೆ ಉತ್ತರ ನೀಡಿ:
- ಭಯೋತ್ಪಾದನೆಯ ವಿಷಯದಲ್ಲಿ ನೀವು ಪಾಕಿಸ್ತಾನದ ಹೇಳಿಕೆಯನ್ನು ಯಾಕೆ ನಂಬಿದ್ದೀರಿ?
- ಟ್ರಂಪ್ ಎದುರು ತಲೆಬಾಗುವ ಮೂಲಕ ನೀವು ಭಾರತದ ಹಿತಾಸಕ್ತಿಗಳನ್ನು ಯಾಕೆ ತ್ಯಜಿಸಿದ್ದಿರಿ?
- ನಿಮ್ಮ ರಕ್ತ ಕ್ಯಾಮೆರಾಗಳ ಮುಂದೆ ಮಾತ್ರವೇ ಯಾಕೆ ಕುದಿಯುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ.