CRICKET: ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಹೊಸ ಕ್ಯಾಪ್ಟನ್‌

ಅಕ್ಷರ್‌ ಪಟೇಲ್‌
ಅಕ್ಷರ್‌ ಪಟೇಲ್‌
ಕ್ರಿಕೆಟ್‌

 

ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಫ್ರಾಂಚೈಸಿಗಳು ಎಲ್ಲಾ ತಯಾರಿ ನಡೆಸಿದ್ದು ತಂಡದ ಆಟಗಾರರನ್ನ ಬರಮಾಡಿಕೊಳ್ಳುತ್ತಿವೆ. ಕೆಲ ಆಟಗಾರರು ಈಗಾಗಲೇ ಫ್ರಾಂಚೈಸಿಯನ್ನು ಸೇರಿಕೊಂಡಿದ್ದಾರೆ. ಇದರ ಜೊತೆಗೆ ಆರ್​ಸಿಬಿ ನಾಯಕನ ಹೆಸರು ರಿವೀಲ್ ಮಾಡಿದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ ಕೂಡ ತಂಡದ ಕ್ಯಾಪ್ಟನ್ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ಟೀಮ್ ಇಂಡಿಯಾದ ಯುವ ಆಲ್​​ರೌಂಡರ್​ ಅಕ್ಷರ್ ಪಟೇಲ್ ಅವರು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಪ್ಟನ್ ಆಗಿದ್ದಾರೆ. ಈ ಕುರಿತು ಡೆಲ್ಲಿ ಫ್ರಾಂಚೈಸಿಯು ಅಧಿಕೃತವಾಗಿ ಘೋಷಣೆ ಮಾಡಿದೆ. ಆರ್​ಸಿಬಿಯ ಮಾಜಿ ಪ್ಲೇಯರ್ ಹಾಗೂ ಮಾಜಿ ನಾಯಕ ಫಾಪ್ ಡುಪ್ಲೆಸ್ಸಿ ಅವರು ಡೆಲ್ಲಿ ಕ್ಯಾಪ್ಟನ್ ಆಗುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಡೆಲ್ಲಿ ಫ್ರಾಂಚೈಸಿಯೂ ಅಕ್ಷರ್ ಪಟೇಲ್ ಅವರನ್ನು ನಾಯಕನಾಗಿ ಅನೌನ್ಸ್ ಮಾಡಿದೆ.

2019 ರಿಂದ ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ಆಡುತ್ತಿರುವ ಅಕ್ಷರ್, 2024 ರ ಮೆಗಾ ಹರಾಜಿಗೆ ಮುನ್ನ 16.50 ಕೋಟಿ ರೂ.ಗೆ ತಂಡದ ಗರಿಷ್ಠ ರಿಟರ್ನ್ ಆಗಿದ್ದರು. ನಾಯಕತ್ವದ ಅನುಭವವಿಲ್ಲದಿದ್ದರೂ, 2025ರ ಜನವರಿಯಲ್ಲಿ ಅವರು ಭಾರತದ T20I ಉಪನಾಯಕರಾಗಿದ್ದರು. ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆ ಟ್ರೋಫಿಗಳು ಸೇರಿದಂತೆ 23 ಪಂದ್ಯಗಳಲ್ಲಿ ಗುಜರಾತ್ ಅನ್ನು ಮುನ್ನಡೆಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವುದು ನನಗೆ ಅತ್ಯಂತ ಗೌರವದ ಸಂಗತಿ. ನಾನು ಒಬ್ಬ ಕ್ರಿಕೆಟಿಗನಾಗಿ ಬೆಳೆದಿದ್ದೇನೆ. ಈ ತಂಡವನ್ನು ಮುನ್ನಡೆಸಲು ನಾನು ಸಿದ್ಧ. ಆತ್ಮವಿಶ್ವಾಸವನ್ನು ಹೊಂದಿದ್ದೇನೆ ಎಂದು ನಾಯಕನಾಗಿ ನೇಮಕಗೊಂಡ ಅಕ್ಷರ್ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಮಾರ್ಚ್ 24 ರಂದು ವಿಶಾಖಪಟ್ಟಣಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.

 

Author:

...
Sub Editor

ManyaSoft Admin

Ads in Post
share
No Reviews