ಶಿರಾ:
ಪ್ರಯಾಗ್ರಾಜ್ ಕುಂಭಮೇಳದಲ್ಲಿ ಭಾಗವಹಿಸಿದ್ದ ನಾಗಸಾಧು ಧನಂಜಯ ಭೈರವ ಅಘೋರಿ ತುಮಕೂರು ಜಿಲ್ಲೆಯ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಶಿರಾ ತಾಲೂಕಿನ ದ್ವಾರಾಳು ಗ್ರಾಮದಲ್ಲಿ ನೆಲೆಸಿರೋ ಉಡುಸಲಮ್ಮ ದೇವಿಯ ಸನ್ನಿಧಾನಕ್ಕೆ ಭೇಟಿ ನೀಡಿ, ವಿಶೇಷಪೂಜೆ ಸಲ್ಲಿಸಿದ್ರು. ನಾಗಸಾಧು ಧನಂಜಯ ಭೈರವ ಅವರನ್ನು ನೋಡಲು ನೂರಾರು ಮಂದಿ ಭಕ್ತರು ಮುಗಿಬಿದ್ದರು.
ಇನ್ನು ಕುಂಭ ಮೇಳದಲ್ಲಿ ಹಿರಿಯೂರಿನ ಹೆಗ್ಗೆರೆಯ ಚೋಳರ ಕಾಲದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮಹಾರುದ್ರ ಶಿವಾಲಯದ ಬಗ್ಗೆ ಮಾತನಾಡಿದ್ರು. ಬಳಿಕ ವಿವಿಧ ದೇಗುಲಗಳಿಗೆ ಭೇಟಿ ನೀಡುತ್ತಾ ಸುದ್ದಿಗೆ ಬಂದವರಾಗಿದ್ದಾರೆ. ಉಡುಸಲಮ್ಮ ದೇವಿಗೆ ಗುಡಿಯನ್ನು ನಿರ್ಮಿಸಲು ಹಲವಾರು ಭಾರಿ ಪ್ರಯತ್ನಪಟ್ಟರು ಸಾಧ್ಯವಾಗಿಲ್ಲ. ಈ ದೇಗುಲದಲ್ಲಿ ಆರ್ಚಕರು, ಕಾಣಿಕೆ ಹುಂಡಿ ಕೂಡ ಈ ಸನ್ನಿಧಿಯಲ್ಲಿಲ್ಲ. ಅಲ್ದೇ ಈ ಸನ್ನಿಧಿಯಲ್ಲಿರುವ ಕಲ್ಲಿನ ಮೇಲೆ ಕುಳಿತು ಹರಕೆ ಕಟ್ಟಿಕೊಂಡ್ರೆ, ಹರಕೆ ಈಡೇರುವುದಾದ್ರೆ ಕಲ್ಲು ತಿರುಗುತ್ತೇ ಅನ್ನೋದು ಇಲ್ಲಿನ ಭಕ್ತರ ನಂಬಿಕೆ. ಈ ದೇವಿ ಶಕ್ತಿ ದೇವತೆಯಾಗಿದ್ದು ಸುತ್ತಮುತ್ತಲ ಗ್ರಾಮಗಳ ಜನರ ಆರಾಧ್ಯ ದೇವತೆಯಾಗಿದ್ದಾಳೆ. ಹೀಗಾಗಿ ಈ ದೇಗುಲ ಸಾಕಷ್ಟು ವಿಶೇಷವಾಗಿದ್ದು ನಾಗಸಾಧುಗಳು ಕೂಡ ಭೇಟಿ ನೀಡಿ ಪೂಜೆ ಸಲ್ಲಿಸಿರೋದು ವಿಶೇಷವಾಗಿತ್ತು.