MOVIE : ಗರ್ಲ್ ಫ್ರೆಂಡ್ ಝೈನಬ್ ಮದ್ವೆಯಾದ ನಾಗಾರ್ಜುನ ಪುತ್ರ ಅಖಿಲ್

MOVIE NEWS : 

 

ತೆಲುಗು ಚಿತ್ರರಂಗದ ಪ್ರಸಿದ್ಧ ನಟ ನಾಗಾರ್ಜುನ ಅವರ ಪುತ್ರ ಮತ್ತು ಯುವ ಹೀರೋ ಅಖಿಲ್ ಅಕ್ಕಿನೇನಿ, ತಮ್ಮ ಗೆಳತಿ ಝೈನಾಬ್ ರವ್ಜೀ ಅವರನ್ನು ಮದುವೆಯಾಗಿದ್ದಾರೆ. ಅದ್ದೂರಿ ವಿವಾಹ ಸಮಾರಂಭ ಶನಿವಾರ ಹೈದರಾಬಾದ್‌ಅನ್ನಪೂರ್ಣ ಸ್ಟುಡಿಯೋದಲ್ಲಿ ನೆರೆವೇರಿತು. ಅಖಿಲ್ ಅವರ ಅಜ್ಜ, ದಂತಕಥೆ ನಟ ಅಕ್ಕಿನೇನಿ ನಾಗೇಶ್ವರ ರಾವ್ ಸ್ಥಾಪಿಸಿದ ಸ್ಟುಡಿಯೋ ಮದುವೆಗೆ ಸಾಂಪ್ರದಾಯಿಕ ಮತ್ತು ಭಾವನಾತ್ಮಕ ಹಿನ್ನೆಲೆಯನ್ನೂ ನೀಡಿತು.

ಇನ್ನು ವಿವಾಹದ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮದುವೆಯಲ್ಲಿ ಅಖಿಲ್ ಬಿಳಿ ಕುರ್ತಾ ಮತ್ತು ಧೋತಿ ಧರಿಸಿದ್ದು, ಝೈನಾಬ್ ಬಿಳಿ ರೇಷ್ಮೆ ಸೀರೆಯಲ್ಲಿ ಮಿಂಚಿದರು.

ವಿವಾಹ ಸಮಾರಂಭದಲ್ಲಿ ತೆಲುಗು ಚಿತ್ರರಂಗದ ಅನೇಕ ಪ್ರಮುಖ ಮುಖಗಳು ಪಾಲ್ಗೊಂಡಿದ್ದರು. ಚಿರಂಜೀವಿ, ರಾಮ್ ಚರಣ್ ಮತ್ತು ಉಪಾಸನ, ಶೋಭಿತಾ ಧೂಲಿಪಾಲ, ನಾಗ ಚೈತನ್ಯ, ದಗ್ಗುಬಾಟಿ ವೆಂಕಟೇಶ್, ನಿರ್ದೇಶಕ ಪ್ರಶಾಂತ್ ನೀಲ್, ಹಾಗೂ ಪಿತೃ ನಾಗಾರ್ಜುನ ಸೇರಿದಂತೆ ಅನೇಕ ಸ್ಟಾರ್‌ಗಳು ಕಾರ್ಯಕ್ರಮಕ್ಕೆ ಪಾಲ್ಗೊಂಡಿದ್ದರು.

Author:

...
Keerthana J

Copy Editor

prajashakthi tv

share
No Reviews