ಮೈಸೂರು:
ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರು ಇಂದು ತಮ್ಮ ಸಿಸಿಎಲ್ ಕ್ರಿಕೆಟ್ ತಂಡದ ಜೊತೆ ಮೈಸೂರಿನ ಚಾಮುಂಡಿ ಬೆಟ್ಟಕೆ ಭೇಟಿ ನೀಡಿ ನಾಡದೇವಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ಮೈಸೂರಿನಲ್ಲಿ ಸಿಸಿಎಲ್ನ ಸೆಮಿಫೈನಲ್ಸ್ ಪಂದ್ಯ ನಡೆಯಲಿದ್ದು, ಈ ಕಾರಣಕ್ಕೆ ಇಂದು ಸುದೀಪ್ ಹಾಗೂ ಕ್ರಿಕೆಟ್ ತಂಡ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ಸುನಿಲ್,ಡಾರ್ಲಿಂಗ್ ಕೃಷ್ಠ, ರಾಜೀವ್, ಮಂಜುನಾಥ್ ತಾಯಿ ಚಾಮುಂಡೇಶ್ವರಿ ದರ್ಶನವನ್ನು ಪಡೆದಿದ್ದಾರೆ. ಮಾರ್ಚ್ 1 ಮತ್ತು 2ರಂದು ಮೈಸೂರಿನಲ್ಲಿ ಸಿಸಿಎಲ್ನ ಸೆಮಿಪೈನಲ್ ಮತ್ತು ಫೈನಲ್ ಪಂದ್ಯ ನಡೆಯಲಿದೆ.